Showing posts with label ಪರಮ ಪಾವನ ವೃಂದಾವನ ಮಳಿಖೇಡ ಕಾಗಿನೀ ನದಿ bheemesha krishna. Show all posts
Showing posts with label ಪರಮ ಪಾವನ ವೃಂದಾವನ ಮಳಿಖೇಡ ಕಾಗಿನೀ ನದಿ bheemesha krishna. Show all posts

Wednesday 1 September 2021

ಪರಮ ಪಾವನ ವೃಂದಾವನ ಮಳಿಖೇಡ ಕಾಗಿನೀ ನದಿ ankita bheemesha krishna

 ..

ಪರಮ ಪಾವನ ವೃಂದಾವನ ಮಳಿಖೇಡ ಕಾಗಿನೀ ನದಿ

ತೀರದಿ ತಪವಾಚರಿಸುತ ಗುರುಗಳು

ಇರುವರ್ಯತಿಗಳ್ಹನ್ನೆರಡು ಮಂದಿ

ರಘುವ(ರ) ಅಕ್ಷೋಭ್ಯತೀರ್ಥರ ನಡುವೆ ಕುಳಿತಿದ್ದಂಥ

ಟೀಕೆ ಬರೆದ ಜಯ ಮಹರಾಯರಿವರು

ಪಾಲಿಸೆನ್ನನು ಜಯರಾಯ ಪ


ಎತ್ತಿನ ಜನ್ಮದಿ ಬಂದು ಶ್ರೀಮದಾನಂದತೀರ್ಥರಲ್ಲಿದ್ದು

ಶಿಷ್ಯತ್ವ ವಹಿಸಿಕೊಂಡು

ಬಿಟ್ಟು ಹರಿದಿನ ಮೇವು ನೀರನೆ ಪುಸ್ತಕದ

ಗಂಟ್ಹೊತ್ತು ತಿರುಗುತ

ತತ್ವಜ್ಞಾನವ ತಿಳಿದು ದ್ವಾದಶ ಸ್ತೋತ್ರ ಹೇ

ಳುತ ಪ್ರಕಟವಾದರು 1


ಗೋವುಸುತನ ಜನ್ಮ ನೀಗಿ ಮಂಗಳವೇಡಿ

ಸಾಹುಕಾರನ ಸುತನಾಗಿ

ತೇಜಿಯನೇರಿ ಮಾ(ಮಹಾ?) ನದಿ ಮಧ್ಯದಲಿ

ಮಂಡಿಬಾಗಿ ನೀರನು ಕುಡಿಯ-

ಲಾಕ್ಷಣ ನೋಡಿ ಕರೆತರಲವರ ಗುರುಗಳ

ಪಾದಕÀ್ವಂದನೆ ಮಾಡಿ ನಿಂತರು 2


ಅಕ್ಷೋಭ್ಯತೀರ್ಥರು ಆ ಮಹಿಮರ ನೋಡಿ

ಕೊಟ್ಟು ಕಾಯ್ಕರದಲಿ

ಜುಟ್ಟು ಜನಿವಾರವನು ಕಿತ್ತೆ ಕಾವಿಶಾಟಿಗಳನು

ಉಟ್ಟು ದಂಡ ಕಾಷ್ಠವ್ಹಿಡಿದು

ಶ್ರೇಷ್ಠಯತಿ ಆಶ್ರಮದಿ ಕುಳಿತಿರೆ ಹೆತ್ತವರು

ಹುಡುಕುತ್ತ ಬಂದರು 3


ಕಂಡಕಂಡಂತೆ ಮಾತುಗಳಾಡಿ ಗುರುಗಳಿಗೆ

ಧೋಂಡು ರಘುನಾಥನ ಕರಕೊಂಡು

ಹಿಂದಕೆ ಹೋಗಿ ಹೆಂಡತಿ ಸಹಿತೆರೆದು ಪ್ರಸ್ತ

ಮಂಡಿಗಿ ಮೃಷ್ಟಾನ್ನ ಉಣಿಸಿ

ಚೆಂದದ್ವಸ್ತ್ರಾಭರಣ ಕೊಟ್ಟುರುಟಣೆಯ

ಮಾಡಿಸ್ಯಾರತಿಯ ಬೆಳಗೋರು 4


ಸುಪ್ಪತ್ತಿಗೆಯು ಮಂಚ ಕುತ್ತಣಿ ಹಾಸಿಕೆಯಲ್ಲಿ

ಇಟ್ಟು ತಾಂಬೂಲ ಬು-

ಕ್ಕಿ ್ಹಟ್ಟು ಪರಿಮಳ ಗಂಧ ಸಕ್ಕರೆ ಕ್ಷೀರಗಳು ಲಡ್ಡಿಗೆ

ಅಚ್ಚಮಲ್ಲಿಗೆ ಮಾಲೆ ಫಲಗಳು

ರತ್ನ ಜ್ಯೋತಿ ಪ್ರಕಾಶದೊಳಗುತ್ತಮರು

ಕುಳಿತಿರಲರ್ಥಿಯಿಂದಲಿ 5


ಮಡದಿ ಮಂಚಕೆ ಬಂದ ಸಡಗರವನು ನೋಡಿ

ಕಡುಕೋಪದಲಿ ದೊಡ್ಡ

ಹೆಡೆಯ ತೆಗೆದು ಕಣ್ಣು ಬಿಡುತ ವಿಷನಾಲಿಗೆಯ

ಚಾಚುತಾರ್ಭಟಿಸಿ ಬರುತಿರಲ-

ಸಾಧ್ಯಸರ್ಪವು ಕಡಿವುದೆನುತೆದೆ ಒಡೆದು ಕೂಗಲು

ಹಡೆದವರು ಬಾಯ್ಬಿಡುತ ಬಂದರು 6


ಹಾವಾಗ್ಹರಿದು ಹುತ್ತವ ಸೇರಿಕೊಂಬುವೋದೀಗ

ನಾವು ಮಾಡಿದಪರಾಧ

ಕ್ಷಮಿಸಬೇಕೆನುತಲಿ ಬೇಡಿಕೊಂಡಾಕ್ಷಣದಿ ಮಗನ

ನೋಡಿ ಕರೆತಂದಾಗ

ಅಕ್ಷೋಭ್ಯರಾಯರಂಘ್ರಿಚರಣಕೊಪ್ಪಿಸಿ ನಾವು

ಧನ್ಯರಾದೆವೆಂದರು 7


ಅತಿ ಬ್ಯಾಗದಿಂದವರಿಗ್ಯತಿ ಆಶ್ರಮವಕೊಟ್ಟು ದೇ-

ವತಾ ಪೂಜೆಗಧಿಕಾರ ಮಾಡಲು

ಗುರುಗಳು ಪಾಂಡಿತ್ಯದಿ (ಇ)ವರಿಗೆ ಪ್ರತಿಯು ಇಲ್ಲ-

ವೆಂದೆನಿಸಿ ಮೆರೆವರು

ಪತಿತರನೆ ಪಾವನವ ಮಾಡಿ ಸದ್ಗತಿಯ ಕೊಡುವ

ಸಜ್ಜನ ಶಿರೋಮಣಿ 8


ಮಧ್ವರಾಯರು ಮಾಡಿದಂಥ ಗ್ರಂಥಗಳಿಗೆ

ತಿದ್ದಿ ಟೀಕೆ ಟಿಪ್ಪಣಿ ಮಾಡಿ

ಇದ್ದ ಮಹಾತ್ಮರು ಪದ್ಮನಾಭ ಭೀಮೇಶಕೃಷ್ಣಗೆ

ಪರಮ ಭಕ್ತರೆನಿಸಿ ಮೆರೆವರು

ವಿದ್ಯಾರಣ್ಯನ ಗರುವ ಮುರಿದು ಪ್ರಸಿದ್ಧರೆನಿಸೋರು

ಸರುವ ಲೋಕದಿ 9

***