Showing posts with label ಶ್ರೀಮನ್ನಾರಯಣ ದೇವ purandara vittala ankita suladi ಸೃಷ್ಟಿ ಪ್ರಕರಣ ಸುಳಾದಿ SRIMANNARAYANA DEVA SRUSHTI PRAKARANA SULADI. Show all posts
Showing posts with label ಶ್ರೀಮನ್ನಾರಯಣ ದೇವ purandara vittala ankita suladi ಸೃಷ್ಟಿ ಪ್ರಕರಣ ಸುಳಾದಿ SRIMANNARAYANA DEVA SRUSHTI PRAKARANA SULADI. Show all posts

Friday, 1 October 2021

ಶ್ರೀಮನ್ನಾರಯಣ ದೇವ purandara vittala ankita suladi ಸೃಷ್ಟಿ ಪ್ರಕರಣ ಸುಳಾದಿ SRIMANNARAYANA DEVA SRUSHTI PRAKARANA SULADI

Audio by Vidwan Sumukh Moudgalya


ಶ್ರೀ ಪುರಂದರದಾಸಾರ್ಯ ವಿರಚಿತ  ಸೃಷ್ಟಿ - ಪ್ರಕರಣ ಸುಳಾದಿ - ೨ 


 ರಾಗ : ಭೈರವಿ 


 ಧೃವತಾಳ 


ಶ್ರೀಮನ್ನಾರಯಣ ದೇವ ನೀನು ಶ್ರೀ ಲ-

ಕುಮಿಯ ಕೂಡ ಸುಖಿಸುತಿದ್ದು

ಶ್ರೀಮನ್ನಾರಯಣದೇವ ಶ್ರೀ ವಾಸುದೇವ 

ಮಾಯಾದೇವಿ ಶ್ರೀಸಂಕರುಷಣದೇವ ಜಯಾದೇವಿ

ಶ್ರೀಪ್ರದ್ಯುಮ್ನದೇವ ಕೃತಿದೇವಿ

ಶ್ರೀಅನಿರುದ್ಧದೇವ ಶಾಂತಿದೇವಿ

ಶ್ರೀಮನ್ನಾರಾಯಣದೇವ ಶ್ರೀ ವಾಸುದೇವ

ಮಾಯಾದೇವಿಯಲ್ಲಿ ಆ

ಬೊಮ್ಮಾ ಕುಮಾರನ ಪಡದೆಯಲ್ಲಾ

ಶ್ರೀಸಂಕರುಷಣದೇವ ಜಯಾದೇವಿಯಲ್ಲಿ

ವಾಯುಕುಮಾರನ ಪಡದೆಯಲ್ಲಾ

ಶ್ರೀಪ್ರದ್ಯುಮ್ನದೇವ ಕೃತಿದೇವಿಯಲ್ಲಿ

ವಾಣಿ ಭಾರತಿಯರ ಪಡದೆಯಲ್ಲಾ

ಶ್ರೀಅನಿರುದ್ಧದೇವ ಶಾಂತಿದೇವಿಯಲ್ಲಿ

ಬೊಮ್ಮ ಸರಸ್ವತಿಯರ ಪಡದೆಯಲ್ಲಾ

ಆ ಕುವರರಿಗೆ ಈ ಕುವರಿಯರನೆ ಇತ್ತು

ಮದುವಿಯ ಮಾಡಿದೆ ಪುರಂದರವಿಠ್ಠಲಾ ॥೧॥


 ಮಟ್ಟತಾಳ 


ವಾಸುದೇವ ನಿಮ್ಮೊಳು ನೀವೆ ನೀವೆ

ಕೊಡಲುಳ್ಳವರಾದಿರಿ ನಿಮ್ಮೊಳು ನೀವೆ

ಬೀದರಾದಿರಿ ನಿಮ್ಮೊಳು ನೀವು ಬಿಜ್ಜಣರಾದಿರಿ

ನಿಮ್ಮೊಳು ನೀವೇ ಬಿಜ್ಜಣಗರಿಗಳು

ನಿಮ್ಮೊಳು ನೀವೆ ಪುರಂದರವಿಠ್ಠಲ ॥೨॥


 ತ್ರಿವಿಡಿತಾಳ 


ಬೊಮ್ಮ ಸರಸ್ವತಿ ಪಡದರಯ್ಯಾ ಶೇಷ

ಸುಪರ್ನ ಗಿರೀಶ ಮಹೇಂದ್ರರ

ವಾಯು ಭಾರತಿ ಪಡದರಯ್ಯಾ

ಪುತ್ರ ಪೌತ್ರ ಪರಂಪರೆಯಾಗಿಪ್ಪೆ ಪುರಂದರವಿಠ್ಠಲಾ ॥೩॥


 ರೂಪಕತಾಳ 


ಆದಿ ಸೃಷ್ಟಿಯಲ್ಲಿ ಜಯ ವಿಜಯರುದಿಸಿದರು

ಅವರಿಗಿಂದ ಅಮರರೆ ಅಧಿಕರಯ್ಯಾ ಅಯ್ಯಾ

ಅವರಂತರಂತರದಲ್ಲಿ ಅವರ ನೋಡಯ್ಯಾ

ತಾರತಮ್ಯ ಅನಾದಿ ಸಿದ್ಧವಯ್ಯಾ

 ಪುರಂದರವಿಠ್ಠಲನ ಸಂತತಿಯ ನೋಡಯ್ಯಾ॥೪॥


 ಝಂಪಿತಾಳ 


ಸಿರಿ ಚತುರ್ಮುಖ ಪಂಚ ಮುಖಾದಿ

ಸುರರು ಮನು ಮುನಿ ಮನುಜೋತ್ತಮರು

ತಾರತಮ್ಯ ಯುಕ್ತರು ಪುರಂದರವಿಠ್ಠಲನ್ನ 

ಚರಣಸೇವಕರು ಸಾ ದೇವರು॥೫॥


 ಅಟ್ಟತಾಳ 


ನಿತ್ಯ ಪತ್ನಿ ಭಾವ ಲಕುಮಿಗಯ್ಯಾ

ನಿತ್ಯ ಪುತ್ರಭಾವ ಬೊಮ್ಮ ಪ್ರಾಣರಿಗಯ್ಯಾ

ನಿತ್ಯ ಪೌತ್ರಭಾವ ವೈನತೇಯ ಶೇಷಗಿರೀಷಗಯ್ಯಾ

ನಿತ್ಯ ಜಾರಭಾವ ಅಪ್ಸರಸ್ತ್ರೀಯರಿಗೆ

ನಿತ್ಯ ಶ್ರೀ ಪುರಂದರವಿಠ್ಠಲರೇಯಾ ॥೬॥


 ಆದಿತಾಳ 


ಸತ್ಯ ಸ್ವರೂಪನೆ ಸತ್ಯನೆ ಮನ್ಯೆ

ಸತ್ಯ ಸಂಕಲ್ಪನೆ ಸತ್ಯ ಕಾಮನೆ

ಸತ್ಯ ಭಾಷಣನೆ ಸತ್ಯ ಭೂಷಣನೆ

ಸತ್ಯ ಸದ್ಗುಣಾಢ್ಯನೆ ಸತ್ಯ ಕರ್ಮನೆ

ಸತ್ಯ ಶ್ರೀ ಪುರಂದರವಿಠ್ಠಲಾ ॥೭॥


 ಜತೆ 


ಮನವಚನಗಳಲ್ಲಿ ಕಾಯಾ ಕರ್ಮಗಳಲ್ಲಿ

ನೀನೇ ನೀನೇ ಪುರಂದರವಿಠ್ಠಲಾ ॥೮॥

****