Showing posts with label ಪಾಲಿಸೋ ಗುರು ಪರಿಪಾಲಿಸೋ ಪಾಲಿಸೋ ಗುರುರಾಘವೇಂದ್ರ gurushyamasundara. Show all posts
Showing posts with label ಪಾಲಿಸೋ ಗುರು ಪರಿಪಾಲಿಸೋ ಪಾಲಿಸೋ ಗುರುರಾಘವೇಂದ್ರ gurushyamasundara. Show all posts

Monday, 6 September 2021

ಪಾಲಿಸೋ ಗುರು ಪರಿಪಾಲಿಸೋ ಪಾಲಿಸೋ ಗುರುರಾಘವೇಂದ್ರ ankita gurushyamasundara

 ರಾಗ: [ಶಂಕರಾಭರಣ] ತಾಳ: [ಅಟ]


ಪಾಲಿಸೋ ಗುರು ಪರಿಪಾಲಿಸೋ


ಪಾಲಿಸೋ ಗುರುರಾಘವೇಂದ್ರ ಮನ

ಸಲ್ಲಿಸಿ ಪ್ರಾರ್ಥಿಪೆ ಚಂದ್ರ ||ಆಹಾ||

ಸೊಲ್ಲನಾಲಿಸಿ ಮನದಿಷ್ಟವ ಸಲ್ಲಿಸಿ

ಫುಲ್ಲಲೋಚನ ಪಾದ ತೋರಿಸಿ ಬೇಗ ಅ ಪ

ಅನುದಿನ ನಿನ್ನನು ನೆನೆವೆ ಮನ

ದನುಮಾನ ಕಳೆ ಘನ ತರುವೆ ನಿನ್ನ-

ವನು ಎಂದು ಪೊರೆ ದಿನ ಗುರುವೆ ||ಆಹಾ||

ಮನವನಿತ್ತವರಿಗೆ ತನುವನೀವೆ ಎಂದು

ಮನಸಿಜನಯ್ಯನ ತುತಿಸಿ ಪಾಡುವ ಗುರು 1

ಅಂಧಕರಿಪುಪುರವಾಸ ಏಸು

ಚಂದವೊ ನಿನಗೆ ಯತೀಶ ಎನ್ನ

ಬಂಧ ಕಳೆವುದು ಯೋಗೀಶ ||ಆಹಾ||

ಮಂದನ ತುತಿಗೀಗ ಬಂದೆನ್ನ ಹೃದಯದಿ

ಅಂದದ ರೂಪವ ತೋರುತ ಎನ್ನನು 2

ಮೂರವತಾರದ ಗುರುವೇ ನಿನ್ನ

ಸಾರಿದವರ ನಿರುತ ಪೊರೆವೆ ಎಂದು

ಸಾರುತಿದೆ ಡಂಗುರ ಹೊರಗೆ ||ಆಹಾ||

ಗರುವವ ಬಿಡಿಸೆಂದು ನಿರುತ ಪಾಡುವೆ ನಿನ್ನ

ಪರಗತಿ ಪಥ ತೋರಿ ಗುರುಶಾಮಸುಂದರ 3

****