ರಾಗ: [ಶಂಕರಾಭರಣ] ತಾಳ: [ಅಟ]
ಪಾಲಿಸೋ ಗುರು ಪರಿಪಾಲಿಸೋ ಪ
ಪಾಲಿಸೋ ಗುರುರಾಘವೇಂದ್ರ ಮನ
ಸಲ್ಲಿಸಿ ಪ್ರಾರ್ಥಿಪೆ ಚಂದ್ರ ||ಆಹಾ||
ಸೊಲ್ಲನಾಲಿಸಿ ಮನದಿಷ್ಟವ ಸಲ್ಲಿಸಿ
ಫುಲ್ಲಲೋಚನ ಪಾದ ತೋರಿಸಿ ಬೇಗ ಅ ಪ
ಅನುದಿನ ನಿನ್ನನು ನೆನೆವೆ ಮನ
ದನುಮಾನ ಕಳೆ ಘನ ತರುವೆ ನಿನ್ನ-
ವನು ಎಂದು ಪೊರೆ ದಿನ ಗುರುವೆ ||ಆಹಾ||
ಮನವನಿತ್ತವರಿಗೆ ತನುವನೀವೆ ಎಂದು
ಮನಸಿಜನಯ್ಯನ ತುತಿಸಿ ಪಾಡುವ ಗುರು 1
ಅಂಧಕರಿಪುಪುರವಾಸ ಏಸು
ಚಂದವೊ ನಿನಗೆ ಯತೀಶ ಎನ್ನ
ಬಂಧ ಕಳೆವುದು ಯೋಗೀಶ ||ಆಹಾ||
ಮಂದನ ತುತಿಗೀಗ ಬಂದೆನ್ನ ಹೃದಯದಿ
ಅಂದದ ರೂಪವ ತೋರುತ ಎನ್ನನು 2
ಮೂರವತಾರದ ಗುರುವೇ ನಿನ್ನ
ಸಾರಿದವರ ನಿರುತ ಪೊರೆವೆ ಎಂದು
ಸಾರುತಿದೆ ಡಂಗುರ ಹೊರಗೆ ||ಆಹಾ||
ಗರುವವ ಬಿಡಿಸೆಂದು ನಿರುತ ಪಾಡುವೆ ನಿನ್ನ
ಪರಗತಿ ಪಥ ತೋರಿ ಗುರುಶಾಮಸುಂದರ 3
****
No comments:
Post a Comment