ರಾಗ: [ಗೌಳ] ತಾಳ: [ಆದಿ]
ನಾನೇನು ನಿನ್ನನು ಬಿಡುವನಲ್ಲ
ದೀನವತ್ಸಲ ಗುರು ಶ್ರೀರಾಘವೇಂದ್ರ ಪ
ಸತಿಸುತರ ಬೇಕೆಂದು ಬೇಡೆ ಎನ್ನ
ಮತಿ ಕೆಡಿಸಿ ಪೋಪರು ಬಾರರು ಹಿಂದೆ
ಗತಿ ನೀನೆ ಎನಗಿಂದು ತಂದೆ ಪರ
ಗತಿಯ ಮಾರ್ಗವ ತೋರು ನೀನೆ ಮನಕಿಂದೆ 1
ಅಧಿಕಾರ ಎನಗೀಯಬೇಡ ಮದ ಜ-
ಲದಿ ಎನ್ನನು ಕುಣಿಸಲು ಬೇಡ
ದಧಿಪಾಲ ಚೋರನ ಕೃಪೆಯ ಪಾದವ-
ನಧಿಲಿ ಮನವೀಯೆ ತಡಮಾಡಬೇಡ 2
ಕಾಮಾದಿಗಳನ್ನೆಲ್ಲ ಗೆಲುವ ದಿವ್ಯ
ಹೇಮಾದಿಗಳನೆಲ್ಲ ದೂರದಲ್ಲಿಡುವ
ಪಾಮರ ಮತಿ ಎನಗಿಲ್ಲ ಗುರು
ಶಾಮಸುಂದರನ ಕೃಪೆ ಆಗಬೇಕಲ್ಲ 3
***
No comments:
Post a Comment