Showing posts with label ರಂಗನೊಲಿದ ನಮ್ಮ ಕೃಷ್ಣನೊಲಿದ purandara vittala RANGANOLIDA NAMMA KRISHNANOLIDA DRAUPADI MANA SAMRAKSHANA. Show all posts
Showing posts with label ರಂಗನೊಲಿದ ನಮ್ಮ ಕೃಷ್ಣನೊಲಿದ purandara vittala RANGANOLIDA NAMMA KRISHNANOLIDA DRAUPADI MANA SAMRAKSHANA. Show all posts

Sunday, 19 December 2021

ರಂಗನೊಲಿದ ನಮ್ಮ ಕೃಷ್ಣನೊಲಿದ purandara vittala RANGANOLIDA NAMMA KRISHNANOLIDA DRAUPADI MANA SAMRAKSHANA




Madhwas in Australia


ಪುರಂದರದಾಸರು

ರಂಗನೊಲಿದ ನಮ್ಮ ಕೃಷ್ಣನೊಲಿದ ||ಪ||
ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ||

ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರು
ಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲು
ಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲು
ಧರ್ಮರಾಯ ಧಾರಿಣಿ ದ್ರೌಪದಿಯ ಸೋತನು ||

ಸೋತನೆಂದು ದುರ್ಯೋಧನ ಸಂತೋಷದಿಂದಲಿ ತನ್ನ
ದೂತರಟ್ಟಿ ಪಾಂಡವರ ಬದುಕು ತರಿಸಿದ
ಜಾತಿ ಮುತ್ತು ಚಿನ್ನ ಬೆಳ್ಳಿ ಆನೆ ಕುದುರೆಗಳ ಸಹಿತ
ಭೀತಿಯಿಲ್ಲದಲೆ ಭಂಡಾರಕಿಟ್ಟನು ||

ಮುದ್ದುಮುಖದ ದ್ರೌಪದಿಯ ಮುಂದೆ ಮಾಡಿ ತನ್ನಿರೆಂದು
ತಿದ್ದಿ ತನ್ನ ಮಾನವರಿಗೆ ತಿಳಿಯಹೇಳಿದ
ಮುದ್ರೆ ಮಾನವರು ಬಂದು ದ್ರೌಪದಿಯ ಮುಂದೆ ನಿಂತು
ಬುದ್ಧಿಯಿಂದಲೆಲ್ಲ ಬಿನ್ನಹ ಮಾಡಲು ||

ಅಮ್ಮ ಕೇಳೆ ಅರಸುಗಳು ಅಚ್ಚಪಗಡೆ ಪಂಥವಾಡಿ
ಹಮ್ಮಲಿಂದ ಜೂಜನಿಟ್ಟು ಲೆತ್ತವಾಡಲು
ಧರ್ಮರಾಯ ಸೋತನೆಂದು ಸತ್ಯವಚನ ಕೌರವಂಗೆ
ನಿಮ್ಮ ಇಂಬು ನಿಲವು ಕರಿಯ ಕೊಟ್ಟರೆಂದರು ||

ಪಟ್ಟಪದವಿ ಅವರಿಗಾಗಿ ಬಡವರಾಗಿ ಇದ್ದೇವೆಂದರೆ
ಕೆಟ್ಟ ಪಗಡೆಪಂಥ ಜೂಜಿನ್ನೆಲ್ಲಿ ಒದಗಿತು
ದುಷ್ಟ ಕೌರವನು ಎನ್ನ ಲಜ್ಜೆ ನಾಚಿಕೆಯ ಕಂಡು
ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ ||

ಬಾಗಿ ಬಳುಕಿ ಬಿಕ್ಕಿ ತನ್ನ ಕಣ್ಣ ನೀರು ಸುರಿವುತಲಿ
ಮಾಗಿಯ ಕೋಕಿಲೆಯಂತೆ ಕಾಯನೊಲವುತ
ಆಗ ಕೃಷ್ಣನಂಘ್ರಿಗಳ ಅಂತರಂಗದಲ್ಲಿ ನೆನೆದು
ಸಾಗಿ ಸಾಗಿ ಹೆಜ್ಜೆಯಿಡುತ ಸಭೆಗೆ ಬಂದಳು ||

ವೀರ ಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತನು
ಕ್ರೂರ ಕೌರವ ದುಶ್ಯಾಸನ ಗುರುಹಿರಿಯರು
ಸಾರುತಿಪ್ಪ ಭಟರು ಪರಿವಾರ ರಾಹುತರ ನೋಡಿ
ಧಾರಿಣಿಗೆ ಮುಖವ ಮಾಡಿ ನಾಚಿ ನಿಂತಳು ||

ಚಂದದಿಂದ ದುರ್ಯೋಧನ ಚದುರೆ ದ್ರೌಪದಿಯ ಕೂಡೆ
ಮುಂದನರಿಯದ ಮುಗುಳುನಗೆಯ ಮಾತನಾಡಿದ
ಹಿಂದೆ ಸ್ವಯಂವರದಲ್ಲಿ ಐವರಿಗೆ ಆದ ಬಾಲೆ
ಇಂದು ಎನ್ನ ಪಟ್ಟದರಸಿಗೊಪ್ಪಿತೆಂದನು ||

ಮಲ್ಲಿಗೆಯ ಮುಡಿಯ ನಾರಿ ಮುದ್ದು ಮುಖದ ವೈಯಾರಿ
ಚಲ್ಲೆಗಂಗಳ ದ್ರೌಪದಿ ಬಾರೆಯೆಂದನು
ಬಿಲ್ಲು ಎತ್ತಲಾರದವನೆ ಭಂಡಾರವ ಕಾದಿದ್ದವನೆ
ಹಲ್ಲು ಕೀಳುವರೈವರು ಬೇಡವೆಂದಳು ||

ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ
ನಿಚ್ಚ ಮುತ್ತಿನಂತೆ ಬಿಂಬಾಧರೆಯೆಂದನು
ಹೆಚ್ಚು ಮಾತನಾಡದಿರೋ ಹೆರರ ಹೆಣ್ಣ ನೋಡದಿರೊ
ನುಚ್ಚು ಮಾಡುವರೈವರು ಬೇಡವೆಂದಳು ||

ಮಟ್ಟಿಬಡಕರೈವರಿಗೆ ಮಡದಿಯಾಗುವುದು ಸಲ್ಲ
ಪಟ್ಟೆಮಂಚಕೊಪ್ಪುವಂತೆ ಬಾರೆಯೆಂದನು
ಕೆಟ್ಟ ಮಾತನಾಡದಿರೋ ಕ್ರೋಧದಿಂದ ನೋಡದಿರೊ
ರಟ್ಟೆ ಕೇಳುವರೈವರು ಬೇಡವೆಂದಳು ||

ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ
ತೊಡೆಯ ಮೇಲೆ ಒಪ್ಪುವಂತೆ ಬಾರೆಯೆಂದನು
ಬೆಡಗು ಮಾತನಾಡದಿರೋ ಭೀಮಸೇನನ ಗದೆಯ ನಿನ್ನ
ತೊಡೆಯ ಮೇಲೆ ಒಪ್ಪುವದು ಬೇಡವೆಂದಳು ||

ಎಷ್ಟು ಬಿಂಕ ಬಡಿವಾರವು ಹೆಣ್ಣು ಬಾಲೆಗಿವಳಿಗೆಷ್ಟು
ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ
ಉಟ್ಟ ಸೀರೆ ಉಡಿಯಲವನ ಉಯಿಕೊ ತೀರಲೆಂದು
ದೃಷ್ಟಿಯಿಂದ ದುಶ್ಶಾಸನಗೆ ಸನ್ನೆಮಾಡಿದ ||

ಮಚ್ಚ ಕೂರ್ಮ ವರಹ ಕಾಯೋ ಮುದ್ದು ನರಸಿಂಹ ಕಾಯೋ
ಹೆಚ್ಚಿನ ವಾಮನನೆ ಕಾಯೊ ಭಾರ್ಗವ ಕಾಯೊ
ಅಚ್ಚ ರಾಮ ಕೃಷ್ಣ ಕಾಯೊ ಬುದ್ಧ ಕಲ್ಕಿ ರೂಪ ಕಾಯೊ
ಸಚ್ಚಿದಾನಂದನೆ ಕಾಯೊ ಸ್ವಾಮಿಯೆಂದಳು ||

ಸಜ್ಜನರ ಪ್ರಿಯ ಕಾಯೊ ಸಾಧುಗಳ ರಕ್ಷಕನೆ ಕಾಯೊ
ನಿರ್ಜರವಂದಿತನೆ ಕಾಯೊ ನರಹರಿ ಕಾಯೊ
ಅರ್ಜುನನ ಸಖನೆ ಕಾಯೊ ಅನಂತಮೂರುತಿ ಕಾಯೊ
ಲಜ್ಜೆ ನಾಚಿಕೆಯ ಕಾಯೊ ಸ್ವಾಮಿಯೆಂದಳು ||

ದುರುಳ ದುಶ್ಯಾಸನನು ಬಂದು ದ್ರೌಪದಿಯ ಮುಂದೆ ನಿಂದು
ಕರವ ಪಿಡಿದು ಸೆರಗ ಹಿಡಿದು ನಿರಿಯ ಸೆಳೆಯಲು
ಮರುಳು ಆಗದಿರೊ ನಿನ್ನ ರಕ್ತದೊಳು ಮುಡಿಯ ಅದ್ದಿ
ಕರುಳು ದಂಡೆಯನೆ ಮಾಡಿ ಮುಡಿವೆನೆಂದಳು ||

ಕಲಹಗಂಟ ಹೆಣ್ಣೆ ನಿನ್ನ ಘಾಸಿ ಮಾಡುವೆನೆಂದು
ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು
ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಿಗೆಯ ಕಿತ್ತು ಎರಡು
ಪಲ್ಲಿನಲ್ಲಿ ಕೇಶನ್ಹಿಕ್ಕಿಕೊಂಬೆನೆಂದಳು ||

ಬೆನ್ನಿನಲ್ಲಿ ಪೆಟ್ಟನಿಕ್ಕಿ ಭಂಡು ಮಾಡುವೆನೆಂದು
ಕನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು
ರನ್ನೆವೀರ ಬೊಬ್ಬೆನಿಕ್ಕಿ ರಭಸದಿಂದ ಸಾರುತಲಿ
ಪನ್ನಗಶಯನ ಕೃಷ್ಣ ಕಾಯೊ ಎಂದಳು ||

ಸಾರಿದವರ ಪೊರೆವ ಕರುಣಿ ಸಾಗರಶಯನ ಕೃಷ್ಣ
ನಾರಿ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು
ಸುರುತಿ ಕಂಭವತಿ ಸಣ್ಣ ಬಣ್ಣ ಸೀರೆಗಳು
ಮೇರುವಿನ ಬೆಟ್ಟದಂತೆ ಮಹಿಮೆ ತೋರಿದ ||

ಹೊಂದಿದವರ ಪೊರೆವ ಕರುಣಿ ಸಿಂಧುಶಯನ ಶ್ರೀ ಕೃಷ್ಣ ನಲ-
ವಿಂದ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು
ಒಂದು ಎರಡು ಮೂರು ನಾಲ್ಕು ಕೋಟಿ ಸಂಖ್ಯೆ ಸೀರೆ ಸುಲಿದು
ನೊಂದು ಬೆಂದು ದುಶ್ಶಾಸನನು ನಾಚಿ ಕುಳಿತನು ||

ನೋಡಿದರು ದ್ರೌಪದಿಯ ಮಾನರಕ್ಷಲೀಲೆಗಳ
ಮಾಡಿದರು ಮಾಧವನ ಮುದ್ದು ಸ್ತೋತ್ರವ
ಮೂಢ ಕೌರವನ ಕೂಡ ಮಾನಿನಿ ದ್ರೌಪದಿಯು ಲೆತ್ತ-
ವಾಡಿ ತನ್ನ ಪತಿಗಳೈವರ ಗೆದ್ದಳು ||

ಕೇಸು ಮುಡಿಯ ಕಟ್ಟಿದಳು ಕೈಯ ಕಾಲ ಮಣ್ಣನೊರೆಸಿ
ಸಾಸಿರನಾಮದ ಒಡೆಯ ಸುರರ ಪಾಲಕ
ವಾಸಿವುಳ್ಳ ಕೃಷ್ಣ ಎನ್ನ ವಹಿಸಿ ಕಾಯಿದಿ ಎಂದು ಸಂ-
ತೋಷದಿಂದ ದ್ರೌಪದಿಯು ಮನೆಗೆ ಬಂದಳು ||

ಭಕ್ತಿಯಿಂದ ದ್ರೌಪದಿಯ ಮಾನರಕ್ಷಲೀಲೆಗಳ
ಯುಕ್ತಿಯಿಂದ ಹಾಡಿ ಪಾಡಿ ಕೇಳುವವರಿಗೆ
ಸಕಲದೋಷಪರಿಹಾರ ಸಂತಾನಫಲಗಳುಂಟು
ಮುಕುತಿ ಕೊಡುವನು ನಮ್ಮ ಪುರಂದರವಿಠಲ ||
*********

ರಾಗ ಸೌರಾಷ್ಟ್ರ. ಆದಿ ತಾಳ (raga, taala may differ in audio)

Ranganolida namma krushnanolida || pa ||
Angane droupadige vastra akshayavendanu || a.Pa. ||

Kariyapurada nagaradalli kouravaru paandavaru |
Dhareyanoddi joojanittu lettavaadalu ||
Parama paapi shakuni taanu | paashadol pokkiralu |
Dharmaraaya dhaaruni droupadiya sotanu || 1 ||

Sotanendu duryodhana santoshadinda tanna |
Dootaratti paandavara baduka tarisida ||
Jaati muttu cinna belli aane kudure sahita |
Bheetiyillade bhaandaarakittanu || 2 ||

Muddu mukhada droupadiya munde maadi tannirendu |
Tiddi tanna maanavarige tiliya helida ||
Mudre maanavaru bandu droupadiya munde nintu |
Buddhiyindalella binnaha maadalu || 3 ||

Amma kele arasugalu accha pagade panthavaadi |
Hammalinda joojanittu lettavaadalu ||
Dharmaraaya sotanendu satyavacana kouravange |
Nimma imbu niluvu kareya kottarendaru || 4 ||

Patta padavi avarigaagi badavaraagi iddevendare |
Ketta pagade pantha joojinnelli odagitu |
Dushta kouravanu enna lajje naachikeya kandu |
Bhrashta maaduvanu endu balali droupadi || 5 ||

Baagi baluki bikki tanna kannaneeru surisutali |
Maagiya kogileyante kaayanolavuta ||
Aaga krushnananghrigala antarangadalli nenedu |
Saagi saagi hejjeyiduta sabhege bandalu || 6 ||

Veera karna ashwatthaama vidura shalya bhagadattanu |
Kroora kourava dushyaasana guru hiriyaru ||
Saarutidda bhataru parivaara raahutara nodi |
Dhaarunige mukhava maadi naachi nintalu || 7 ||

Chandadinda dhuryodhana chadure droupadiya koode |
Mundanariyade mugulunageya maatanaadida ||
Hinde swayamvaradalli aivarige aada baale |
Indu enna pattadarasigoppitendanu || 8 ||

Malligeya mudiya naari muddu mukhada vaiyyaari|
Chellegangala droupadi baare endanu ||
Billu ettalaaradavane bhaandaarava kaadiddavane |
Hallu keeluvaraivaru bedavendalu || 9 ||

Accha pombannada bombe aaneyante nadevarambhe |
Niccha muttinante bimbaadhare baare endanu |
Hecchu maatanaadadiro herara henna nodadiro |
Nucchu maaduvaraivaru bedaven dalu || 10 ||

Matte bada karaivarige madadi yaaguvadu salla |
Patte mamchakoppuvante baare endanu ||
Hecchu maatanaa dadiro krodhadinda nodadiro |
Ratte keeluvaraivaru bedavendalu || 11 ||

Adavi tirakaraivarige madadiyaaguvadu salla |
Todeya mele oppuvante baare endanu ||
Bedagu maatanaadadiro bheemasenana gadeyu ninna |
Todeya mele oppuvadu bedavendalu || 12 ||

Eshtu binka badivaaravu hennu baalegivaligishtu |
Sittininda duryodhana saari kopisi ||
Utta seere udiyalavala uyiko teeralendu |
Drushthiyinda dushyaasanage sanne maadida ||13 ||

Maccha koorma varaaha kaayo muddu Naarasimha kaayo |
Hecchina vaamanane kaayo bhaargavane kaayo ||
Accha raama krushna kaayo buddha kalkiroopa kaayo |
Sachidaanandane kaayo swaami endalu || 14 ||

Sajjanara priya kaayo saadhu rakshakane kaayo |
Nirjara vanditane kaayo narahari kaayo ||
Arjunana sakhane kaayo ananta mooruti kaayo |
Lajje naachikeya kaayo swaami endalu || 15 ||

Durula dushyaasananu bandu droupadiya munde nindu |
Karava pididu seraga hididu neriya seleyalu ||
Marulu aagadiro ninna raktadolu mudiya addi |
Karulu dandeyane maadi mudivenendalu || 16||

Kalahagante henne ninna ghaasi maaduvenendu |
Galladalli kaiyanikki neriya seleyalu ||
Nillo nillo paapi ninna naaligeya kittu eradu |
Pallinalli keshanhikki kombenendalu || 17 ||

Benninalli pettanikki bhandu maaduvenendu |
Kenneyalli kaiyanikki neriya seleyalu ||
Ranne veere bobbenikki rabhasadinda saarutali |
Pannagashayanaa krushna kaayo endalu || 18 ||

Saaridavara poreva karuni saagarashayana krushna |
Naari droupadige vastra akshayavemdanu ||
Suruti kumbhavati sanna banna seeregalu |
Meruvina bettadante mahime torida || 19 ||

Pondidavara poreva karuni sindhushayana shreekrushna |
Nalavininda droupadige vastra akshayavendanu||
Ondu eradu mooru naalku koti sankhye seere sulidu |
Nondu bendu dushyaasananu naachi kulitanu ||20 ||

Nodidaru droupadiya maanaraksha leelegala |
Maadidaru maadhavana muddu stotrava ||
Moodha kouravana kooda maanini droupadiyu |
Maatanaadi tanna patigalaivaranu geddalu || 21||

Kesu mudiya kattidalu kaiya kaala mannanorasi
Saasira naamada odeya surara paalaka ||
Vaasavulla krushna enna vahisi kaaydi |
Endu santoshadinda droupadiyu manege bandalu || 22 ||

Bhaktiyinda droupadiya maana raksha leelegala |
Yuktiyinda haadi paadi keluvavarige |
Sakala dosha parihaara santaana sampattu phalagaluntu |
Mukuti koduvanu namma purandara viththala ||23 ||
***

pallavi

ranganoLiya namma krSNanolida

anupallavi

angane draupadige vastra akSeyavendanu

caraNam 1

kariya purada kauravaru pANDavaru dhareya oDDi jUjaniTTu lettavADalu
parama pApi shakuni tAnu pAshadoLu pokkiralu dharmarAya dhAriNi draupadiy sOtanu

caraNam 2

sOtanendu duryOdhana santOSadindali tanna dUtaraTTi pANdavara baduku tarisida
jAti muttu cinna beLLi Ane kuduregaLa sahita bhItiyilladale bhaNDArakiTTanu

caraNam 3

muddu mukhada draupadiya munde mADi tannirendu tiddi tanna mAnavarige tiLiya hELida
mudre mAnavaru bandu draupadiya munde nintu buddhiyindalella binnaha mADalu

caraNam 4

amma kELearasugaLa acca paGaDe panthavADi himmalinda jUjaniTTu lettavADalu
dharmarAya sOdanendu satya vacana kauravange nimma imbu nilavu kariya koTTarendaru

caraNam 5

paTTa padavi avarigAgi baDavarAgi iddEvendare keTTa pagaDe pantha jUjinnelli odagitu
duSTa kauravanu enna lajje nAcikeya kaNDu bhraSTa mADuvanu endu baLali draupadi

caraNam 6

bAgi baLugi bikki tanna kaNNa nIru surivutali mAgiya kOkileyante kAyanolavuta
Aga krSNanAnghrigaLa antarangadallinenedu sAgi hejjeyiDuta sabhege bandaLu

caraNam 7

vIra karNa ashvattAma vidura shalya bhagadattanu krUra kaurava dushyAsana guru hiriyaru
sArutippa bhaTaru parivAra rAhutara nODi dhAriNige mukhava mADi nAci nintaLu

caraNam 8

candadinda duryOdhana cadure draupadiya kUDe mundenariyade muguLu nageya mAtanADida
hinde svayam varadalli jvarige Ada bAle indu enna paTTadarasigoppitendanu

caraNam 9

malligeya muDiya nAri muddu mukhada vaiyAri calle kangaLa draupadi bAreyendanu
billu ettalAradavane bhaNDArava kAdiDtavane hallu kILuvaraivaru bEDavendaLu

caraNam 10

acca bombaNNada bombe Aneyante naDeva rambhe nicca muttinante bimbAdhareyendanu
heccu mAtanADadiro herara heNNa nODadiro nuccu mADuvaraivaru bEDavendaLu

caraNam 11

maTTibaDakaraivarige maDadiyAguvudu salla paTTe mancakoppuvante bAreyendanu
keTTa mATanADadiro krOdhadinda nODadiro raTTe kELuvaraivaru bEDavendaLu
1
caraNam 2

aDavitirukaraivarige maDadiyAguvudu salla toDeya mEle oppuvante bAreyendanu
beDagu mAtanADadirO bhImasEnana gadeya ninna toDeya mEle oppuvadu bEDavendaLu
1
caraNam 3

eSTu binka baDivAravu heNNu bAlegivaLigeSTu siTTininda duryOdhana sAri kOpisi
uTTa sIre uDiyalavana uyiko tIralendu drSTiyinda dushyAsanage sannemADida
1
caraNam 4

macca kUrma varaha kAyO muddu narasimha kAyO heccina vAmanane kAyo bhArgava kAyo
acca rAma krSNa kAyo buddha kalki rUpa kAyo saccidAnandane kAyo svAmiyendaLu
1
caraNam 5

sajjanara priya kAyo sAdhugaLa rakSakane kAyo nirjara vanditane kAyo narahari kAyo
arjunana sakhane kAyo ananta mUruti kAyo lajje nAcikeya kAyo svAmiyendaLu
1
caraNam 6

duruLa dushyAsananu bandu draupadiya munde nindu karava piDidu seraga hiDidu niriya seLeyalu
maruLu Agadiro ninna raktadoLu muDiya addi karuLu daNDeyane mADi muDivenendaLu
1
caraNam 7

kalakhaNTa heNNe ninna gAsi mADuvenendu galladalli kaiyanikki niriya seLeyalu
nillo nillo pApi ninna nAlikeya kittu eraDu ballinalli kEshanhikki kombenendaLu
1
caraNam 8

benninalli peTTanikki bhaNDu mADuvenendu kanneyali kaiyanikki niriya seLeyalu
ranne vIra bobbenikki rabhasadinda sArutali pannaga shayana krSNa kAyo endaLu
1
caraNam 9

sAridavara poreva karuNi sAgara shayana krSNa nAri draupadige vastra akSeyavendanu
suruti kambhavti saNNa baNNa sIregaLu mEruvina beTTadante mahime tOrida
20: hondidavara poreva karuNi sindhu shayana shrI krSNa nala vinda draupadige vastra akSayavendanu
ondu eraDu mUru nAlku kOTi sankhye sIre sulidu nondu bendu dushyAsanu nAci kuLitanu
21: nODidaru draupadiya mAnarakSa lIlegaLa mADidaru mAdhavana muddu stOtrava
mUDha kauravana kUDa mAnini draupadiyu letta vADi tanna patigaLaivara geddaLu
2
caraNam 2

kEsu muDiya kaTTidaLu kaiya kAla maNNanoresi sAsira nAmada oDeya surara pAlaka
vAsivuLLa krSNa enna vahisi kAyidi endu santOSadinda draupadiyu manage bandaLU
2
caraNam 3

bhaktiyinda draupadiya mAna rakSe lIlegaLa yuktiyinda hADi pADi kELuvarige
sakala dOSa santAna balagaLuNDu muruti koDuvanu namma purandara viTTala
***

just scroll down for other devaranama 

ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತು ಪ

ಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1

ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2

ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3

ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4

ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5

ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6

ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7

ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8

ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9

ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10

ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11

ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12

ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13

ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14

ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15

ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16

ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17

ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18

ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19

ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20

ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
****

just scroll down for other devaranama