ಶ್ರೀ ಸತ್ಯ ಪ್ರಮೋದ ತೀರ್ಥರ ಸ್ಮರಣೆ
ಮೋದದಿ ನಿಮ್ಮಯ ಪಾದಕೆ ವಂದಿಪೆ
ಭೇದ ಮಾಡದಲೆ ಕಾಯೊ ಗುರುವೇ
ಸತ್ಯಪ್ರಮೋದ ಗುರುವೇ ನಿಮ್ಮಯ
ಭೃತ್ಯನಾಗಿಹೆ ನಾನು||ಪಲ್ಲ||
ಪಂಚ ದಶಕಗಳ ರಾಮನ ಪೂಜಿಸಿ
ಪಂಚ ಭೇದ ತಾರತಮ್ಯವ ತಿಳಿಸಿ
ಪಂಚೇಂದ್ರಿಯಗಳ ಸುಲುಭದಿ ಜಯಿಸಿ
ಪಂಚಮುಖದ ಪ್ರಾಣೇಶನ ಸ್ತುತಿಸಿದ||೧||
ಹತ್ರಿರ ಬರುತಿಹ ಭಕ್ತರ ಸಲಹುತ
ನಿತ್ಯ ತೃಪ್ತಗೆ ನೈವೇದ್ಯವ ಮಾಡುತ
ಉತ್ತರೋತ್ತರ ರಾಮನ ಭಜಿಸಿ
ಉತ್ತರಾದಿಮಠವೆತ್ತರ ತರಿಸಿದಖ||೨||
ಮಧ್ವ ಮತದ ಸಿಧ್ಧಾಂತವ ತಿಳಿಸಿ
ತತ್ವ ಮಾರ್ಗ ಸದಾಕಾಲ ಬೋಧಿಸಿ
ಮಧ್ವೇಶಕೃಷ್ಣನ ನಿರಂತರ ಪೂಜಿಸಿ
ಮಧ್ವರಾಯರ ಕರುಣವ ಪಡೆದಿಹ||೩||
**********