suvrateendra teertha rayara mutt 1933 yati stutih
ಶ್ರೀ ಶ್ಯಾಮಸುಂದರದಾಸರು...
ರಾಗ : ಭೂಪ ತಾಳ : ದೀಪಚಂದಿ
ಪೊಂದಿ ಭಜಿಸೊ ನಿರುತಾ ಮಾನವ ಮಹಿ ।
ವೃಂದಾರಕ ವ್ರಾತಾ ।। ಪಲ್ಲವಿ ।।
ವಂದಿತ ಶ್ರೀ ಸುಯಮೀಂದ್ರರ । ಹೃದಯಾರ ।
ವಿಂದ ಭಾಸ್ಕರ ಸುವ್ರತೀಂದ್ರರ ಪದಯುಗ ।। ಅ. ಪ ।।
ಧರೆಯೊಳು ದ್ವಿಜನಿಕರ ಉದ್ಧರಿಸಲು ।
ಗುರುವರ ಸುಶೀಲೇಂದ್ರರ ।
ಕರದಿ ತುರ್ಯಾಶ್ರಮ ಧರಿಸುತ । ಶ್ರೀ ಮೂಲ ।
ತರಣೆ ಕುಲೇಂದ್ರನ ಚರಣವ ಪೂಜಿಸಿ ।
ಮರುತ ಶಾಸ್ತ್ರದ ಭಕ್ತಿ ಪೂರ್ವಕ ।
ನಿರುತ ಪ್ರವಚನಗೈದು । ಶಿಷ್ಯರಿ ।
ಗೊರೆದು ಕರುಣದಿ ಪೊರೆವ ಪಾವನ ।
ಚರಿತರಡಿದಾವರೆಗಳ ಹರುಷದಿ ।। ಚರಣ ।।
ಸಲೆಭಕ್ತಿ ಸುವಿರಕುತಿ ಸುಶಾಂತ್ಯಾದಿ ।
ಹಲವು ಸದ್ಗುಣ ಪ್ರತತಿ ।
ಕಲಿಯೊಳಿಳೆಯೊಳು ಸ್ಥಳವ ಕಾಣದೆ ವಿಧಿ ।
ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ ।
ಇಳೆಯೊಳಗೆ ಸುವ್ರತೀಂದ್ರತೀರ್ಥರ ।
ಚಲುವ ಹೃದಯ ಸ್ಥಾನ ತೋರಲು ।
ಬಳಿಕ ಸುಗುಣಾವಳಿಗಳಿವರೊಳು ।
ನೆಲೆಸಿದವು ಇಂಥ ಮಹಿಮರ ।। ಚರಣ ।।
ಶಿರಿಮುಖ ವತ್ಸರದಿ ಸುವೈಶಾಖ ।
ವರ ಮಾಸ ಶಿತ ಪಕ್ಷದಿ ।
ಹರಿದಿನದಲಿ ಡಿವ ಮೂರನೆಯಾಮದಿ ।
ವರ ಮಂತ್ರ ಮಂದಿರ ಪರಮ ಸುಕ್ಷೇತ್ರದಿ ।
ಸಿರಿ ಮನೋಹರ ಶ್ಯಾಮಸುಂದರ ।
ಸರಸಿಜಾ೦ಘ್ರಿಯ ಸ್ಮರಿಸುತಲಿ ಶುಭ ।
ಕರ ಸುಲಯ ಚಿಂತನೆಗೈಯುತ ।
ಹರಿಪುರಕೆ ಪೊರಮೊಟ್ಟ ಗುರುಪದ ।। ಚರಣ ।।
****