Showing posts with label ಯಾದವರರಸಿಲ್ಲೆ ಸಿಕ್ಕಿದನಲ್ಲೆ hayavadana. Show all posts
Showing posts with label ಯಾದವರರಸಿಲ್ಲೆ ಸಿಕ್ಕಿದನಲ್ಲೆ hayavadana. Show all posts

Wednesday, 1 September 2021

ಯಾದವರರಸಿಲ್ಲೆ ಸಿಕ್ಕಿದನಲ್ಲೆ ankita hayavadana

 ..

ಯಾದವರರಸಿಲ್ಲೆ ಸಿಕ್ಕಿದನಲ್ಲೆ ಪ.


ಸಿಕ್ಕಿದನಲ್ಲೇ ದಕ್ಕಿದನಲ್ಲೆಅ.ಪ.ಗೋಪಿಯ ಕಂದನೆ ಬೆಣ್ಣೆಯ ತಿಂದನೆಪೂತಣಿಯ ಕೊಂದನೆ ಮಧುರೆಗೆ ಬಂದನೆ 1


ಮಾಧವನಿವನೇ ವೇದಕೆ ಸಿಲುಕನೆಸಾಧುಗಳರಸನೆ ಸಜ್ಜನಪೋಷನೆ 2


ಜಾಣರಜಾಣನೆ ಗಾನಕೆ ಪ್ರೀಯನೆಮುನಿಗಳ ವಂದ್ಯನೆ ಮನ್ಮಥಪಿತನೆ 3


ಕಾಮಿತವೀವೋನೆ ಭಾಮಾಪ್ರೀಯನೆನೇಮದಿಭಜಿಪರ ಸದನಕ್ಕೆ ಬರುವನೆ 4


ವೇದವ ತಂದನೆ ಗಿರಿಯ ಪೊತ್ತನೆಬೇರನು ತಿಂದನೆ ಕಂಬದಿ ಬಂದನೆ 5


ದಾನವ ಬೇಡನೆ ಕ್ಷತ್ರೇರ ಕೊಂದನೆವನಕೆ ಪೋದನೆ ದುರುಳರ ಕೊಂದನೆ6


ಕಾಳೀಯ ಭಂಜನೆ ಬತ್ತಲೆ ನಿಂದನೆಹಯವನೇರ್ದನೆ ಹಯವದನನೆ7

***