ರಘುರಾಮಾ ರಘುರಾಮಾ
ಮುಗಿವೆ ಕರವ ಎನ್ನಫ ಓಡಿಸಿ ಪೊರೆ ಪ
ಕ್ಷಿತಿ ಭಾರಕೆ ಖಳ ತತಿ ಸಂಹರಿಸಲು
ದ್ವಿತಿಯ ಯುಗದಿ ದಶರಾಥಸುತನೆನಿಸಿದ 1
ಶಿಲೆಯಾದ ಅಹಲ್ಯೆಯ ತುಳಿದ ಪಾದದಿಂ
ಕಲುಷಿತ ಕಳೆದುಸಿರದೆ ಸಲುಹಿದ ಕರುಣಿ 2
ಧನುಮುರಿದು ಕ್ಷೋಣಿ ಕುಮಾರಿಯ
ಪಾಣಿ ಪಿಡಿದ ಮೂರುತಿಯೇ 3
ಪ್ರೀತಿಯಿಂದ ರವಿಜಾತನ ಭ್ರಾತಗೆ
ಭೀತಿಯ ಬಿಡಿಸಿದ ವಾತಜ ನಮಿತ 4
ದುರುಳ ದುಶ್ಯಾಸನನ ಧುರದಿ ತರಿದು ಘನ
ಸುರರಿಗೆ ಸೌಖ್ಯವಗರೆದ ಮಹಾತ್ಮ 5
ನಿನ್ನ ದರುಶನದಿಲೆನ್ನ ಜನ್ಮ ಪಾವನ್ನವಾಯತೈ
ಸನ್ನುತ ಮಹಿಮಾ6
ಶಿಂಧಶತಪುರ ಮಂದಿರ ಶಾಮ
ಸುಂದರವಿಠಲ ಬಂಧುರ ಚರಿತ 7
***