..
ಭಕ್ತಿಯಲಿ ತನುಮನವು ಸತತ ಬಗ್ಗಿರಲಯ್ಯ
ಭುಕ್ತಿಯೆ ಮಹಾಭಕ್ತಿ ನೀಡು ಎನಗೆ ಪ
ಯುಕ್ತಿ ಶಕ್ತಿಗಳೆಲ್ಲ ಬಿಡದಿರಲಿ ತತ್ಪಾದ
ಶಕ್ತಿಯನು ಎಂದೆಂದು ಗುಣಪೂರ್ಣ ನಿಧಿಯೆ ಅ.ಪ
ಇಹಭೋಗ ಬಿಡಿಸಯ್ಯ ಮಹದಾದಿ ದೇವೇಶ
ಗುಹಪಿತನಸಖ ನರನಸೂತ ಬಂಧು
ಮುಹುರ್ಮುಹು ಪ್ರಾರ್ಥಿಸುವೆ ಮಹಿದಾಸ್ಯ ಹರಿದಾಸ್ಯ
ಮಹಪದವಿ ಕರುಣಿಸಯ್ಯ ಮರುತ ಮಂದಿರ ವಿಭುವೆ 1
ಪಂಚಬೇಧ e್ಞÁನ ಅನುಷ್ಠಾನದಿ ಇರಲಿ
ಚಂಚಲಿಲ್ಲದ ಭಕ್ತಿ ಇತ್ತು ಮೆಚ್ಚಿ
ವಂಚಿಸದೆ ಸಂಸಾರ ಯಾತ್ರೆಯಲಿ ಒಡನಾಡು
ಪಂಚಾತ್ಮ ಜಯೇಶವಿಠಲನೆ ಮದ್ಬಿಂಬ 2
***