Showing posts with label ಏನೆಂದ್ಹೇಳಲಿ ಸ್ವಾನಂದ ಮಹಿಮೆಯು ಏನೆಂದ್ಹೇಳಲಿ ಮಾ mahipati. Show all posts
Showing posts with label ಏನೆಂದ್ಹೇಳಲಿ ಸ್ವಾನಂದ ಮಹಿಮೆಯು ಏನೆಂದ್ಹೇಳಲಿ ಮಾ mahipati. Show all posts

Wednesday, 1 September 2021

ಏನೆಂದ್ಹೇಳಲಿ ಸ್ವಾನಂದ ಮಹಿಮೆಯು ಏನೆಂದ್ಹೇಳಲಿ ಮಾ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಏನೆಂದ್ಹೇಳಲಿ ಸ್ವಾನಂದ ಮಹಿಮೆಯು ಏನೆಂದ್ಹೇಳಲಿ ಮಾ  p 


ವೇದಲ್ಲ ವಾದಲ್ಲ ಭೇದಮಾಡುವದಲ್ಲ ಸಾಧಕರಿಗೆ ತಾ ಸಿಲುಕುದುಮಾ ಓದಲ್ಲ ಶೋಧಲ್ಲ ಗಾದಿಯ ಮಾತಲ್ಲ ಭೇದಿಸಿದರೆ ತಾನು ತಿಳಿವದು ಮಾ 1 

ಧ್ಯಾನಲ್ಲ ಮೋನಲ್ಲ ಸ್ನಾನ ಸಂಧ್ಯಾನಲ್ಲ ಙÁ್ಞನಹೀನರಿಗಿದು ತಿಳಿಯದು ಮಾ ನಾನಲ್ಲ ನೀನಲ್ಲ ನಾನುಡಿದ ಮಾತಲ್ಲ ಅನುಭವ ಸಿದ್ಧನು ಬಲ್ಲನು ಮಾ 2 

ಸೇವಲ್ಲ ಸೂತ್ರಲ್ಲ ಬಾಹ್ಯನೋಟಿಕೆ ಅಲ್ಲ ಮಹಿಪತಿ ನಿನ್ನೊಳು ತಿಳಿವದು ಮಾ ಕೌತುಕವನು ಕಂಡು ಮಹಾ ಗುರುಕೃಪೆಯಿಂದ ಸಾಯೋಜ್ಯ ಸದ್ಗತಿ ಪಡೆವದು ಮಾ 3

***