ಒಡಿಯ ನೀನಹುದೊ ಎನ್ನ ಬಡವನಾಧಾರಿ ನೀನು p
ಪೊಡವಿಯೊಳಗೆ ಎನ್ನ ಬಿಣದೆ ಸಲಹುತಿಹ್ಯ ಅಡಿಗಡಿಗೆ ತಂದು ನೀ ಪಡಿಯ ನಡೆಸುವ ಸ್ವಾಮಿ 1
ಪಿಡಿದು ಎನ್ನ ನೀ ಕೈಯ ಕಡೆಗಾಣಿಸುವಿ ಪೂರ್ಣ ಬಿಡಿಸಿ ಧಾವತಿಯಿಂದ ಕೊಡುವಿ ತಂದು ನಿಧಾನ 2
ಕೊಂಡಾಡಲಳವೆ ನಿನ್ನ ಮಂಡಲದೊಳು ಕೀರ್ತಿ ಪಿಂಡ ಬ್ರಹ್ಮಾಂಡ ಪರಿಪೂರ್ಣವಾಗಿಹ ದೇಹ 3
ಕೊಳದೆ ಸೇವೆಯ ನಿನ್ನ ಅಳೆದು ನಡೆಸುವ ಪಡೆಯ ಪಾಲಕನಹುದೊ ಎನ್ನ ಮೂಲೋಕದೊಡಿಯನೆ 4
ನಿತ್ಯನಿಜವಾಗ್ಯಾಗ ಹೊತ್ತು ನಡೆಸುವ ಪಡೆಯ ಭೃತ್ಯ ನಿಜ ದಾಸಮಹಿಪತಿಗಿನ್ನು 5
***