Showing posts with label ಹರಿನೀ ನೋಡದಿರೆ ಬಾಳಬಹುದೆ jayesha vittala. Show all posts
Showing posts with label ಹರಿನೀ ನೋಡದಿರೆ ಬಾಳಬಹುದೆ jayesha vittala. Show all posts

Thursday, 5 August 2021

ಹರಿನೀ ನೋಡದಿರೆ ಬಾಳಬಹುದೆ ankita jayesha vittala

 ..

ಹರಿ ನೀ ನೋಡದಿರೆ ಬಾಳಬಹುದೆ ಪ


ಸರುವ ಮೂಲನೆ ದೇವ ಪರಮಪಾವನ ಮಹಿಮ ಅ.ಪ.


e್ಞÁನಮಯ ವಿe್ಞÁನ ಮಾನಿಗಳ ಹೆದ್ದೈವ

ದಾನವಾಂತಕ ದಿವಿಜ ಪ್ರಾಣಾಧಾರಿ

ದೀನ ಬಾಂಧವ ಹೃದಯ ವನಜ ಮಂದಿರ ಪೂರ್ಣಾ

ನಿನೊಹಿಸಿ ಮದ್ಧರ್ಮ ಕಾಣಿಸೊ ಕರುಣಾಬ್ಧಿ 1


ಘೋರ ಕಲಿಮಲ ವ್ಯಾಪ್ತಿ ಮೀರಿಹುದು ಸಜ್ಜನರ

ಶ್ರೀರಮಣ ಶ್ರುತಿಧರ್ಮ ಜಗವೆಲ್ಲಿದೆಯಯ್ಯ

ಭಾರಕರ್ತನೆ ನಿನ್ನ ಆರಾಧಿಸದೆ ಜನರು

ಸ್ವಾರಾಧ್ಯರಾಗಿಹರು ಗತಿಯೇನೊ ಸುಜನಕೆ 2


ಸರ್ವೋತ್ತಮನೆ ನಿನ್ನ ಕತ್ರ್ಯುಳಿಸಲಿದು ಕಾಲ

ಸರ್ವಾತ್ಮ ಮರುದಾತ್ಮ ಜಯೇಶವಿಠಲ

ಪೊರ್ವ ದೇವರ ಗಮನ ಗೀರ್ವಾಣ ಮುನಿ ವಂದ್ಯ

ಶರ್ವಸನ್ನುತ ಶೌರಿ ರುಜುಮನವ ಕೊಡೆನಗೆ 3

***