by ಗೋವಿಂದದಾಸ
ಮಂಗಲಂ ಜಯ ಮಂಗಲಂಮಂಗಲಂಶುಭಮಂಗಲಂ ಪ
ನೀರೊಳು ಮುಳುಮುಳುಗ್ಯಾಡಿದಗೇಘೋರತಮವ ಹತ ಮಾಡಿದಗೆಮೂರೊಂದು ವೇದವ ತಂದವಗೆಧೀರಗೆ ಮತ್ಸ್ಯವತಾರನಿಗೆ1
ಸುರರ ಮೊರೆಯಕೇಳಿಬಂದವಗೇಗಿರಿಯ ಬೆನ್ನಲಿ ಪೊತ್ತು ನಿಂದವಗೆತ್ವರಿತದಿ ಶರಧಿಯ ಮಥಿಸಿದಗೆಕರುಣಾಕರನಿಗೆ ಕೂರ್ಮನಿಗೆ2
ಕೆರಳುತ ಕೋರೆಯ ಮಸೆದವಗೆಗುರುಗುರಿಸುತ ಧುರವೆಸೆದವಗೆದುರುಳಹೇಮಾಕ್ಷನ ಮಥಿಸಿದಗೆಧರಣಿಯ ತಂದಗೆ ವರಹನಿಗೆ3
ತರಳನು ಸ್ಮರಿಸಲು ಬಂದವಗೆಧುರದೊಳುದೈತ್ಯನ ಕೊಂದವಗೆಕರುಳನು ಕಂಠದಿ ಧರಿಸಿದಗೆಸುರನರವಂದ್ಯಗೆ ನರಸಿಂಹಗೆ4
ಬಲಿಯೊಳು ದಾನವ ಬೇಡಿದಗೆನೆಲವನುಈರಡಿಮಾಡಿದಗೆಛಲದಲಿ ಬಲಿಯನು ಮೆಟ್ಟಿದಗೆಚಲುವಗೆ ವಾಮನ ಮೂರುತಿಗೆ5
ಹಸ್ತದಿ ಕೊಡಲಿಯ ಪಿಡಿದವಗೆಪೃಥ್ವೀಪಾಲರ ಶಿರ ಕಡಿದವಗೆಧಾತ್ರಿಯ ವಿಪ್ರರಿಗಿತ್ತವಗೇ ಕ್ಷತ್ರಿವಿರೋಧಿಗೆ ಭಾರ್ಗವಗೆ6
ದಶರಥ ನಂದನನೆನಿಸಿದಗೆಶಶಿಮುಖಿಸೀತೆಯ ವರಿಸಿದಗೆದಶಶಿರದೈತ್ಯನ ಮಥಿಸಿದಗೆಕುಸುಮಾಕ್ಷನಿಗೆ ಶ್ರೀರಾಮನಿಗೆ7
ಮುರಲೀಧರನೆಂದೆನಿಸಿದಗೆದುರುಳಕಂಸನ ಮಥಿಸಿದಗೆತರಳೆ ರುಕ್ಮಿಣಿಯನು ತಂದವಗೆಮುರಹರಮೂರ್ತಿಗೆ ಕೃಷ್ಣನಿಗೆ8
ತ್ರಿಪುರರ ಸತಿಯರ ಒಲಿಸಿದಗೆತ್ರಿಪುರರ ಶಿವನಿಂಗೆಲಿಸಿದಗೆಕಪಟದ ಮೋಹನ ರೂಪನಿಗೆನಿಪುಣಗೆ ಬೌದ್ಧಾವತಾರನಿಗೆ9
ಹಸ್ತದಿ ಕತ್ತಿಯ ಪಿಡಿದವಗೆಉತ್ತುಮ ಹಯವೇರಿ ನಡೆದವಗೆಮಾತುಳಶಿರವನು ಕಡಿದವಗೆಉತ್ತುಮ ಮೂರ್ತಿಗೆ ಕಲ್ಕ್ಯನಿಗೆ10
ಇಂದಿರೆಯರಸಗೆ ಸುಂದರಗೆಸಿಂಧುಮಂದಿರದಲಿ ನಿಂದವಗೆಮಂದಸ್ಮಿತಮುಖ ಚಂದ್ರನಿಗೆಗೋವಿಂದಗೆ ದಾಸನ ವಂದ್ಯನಿಗೆ
******