by ಗೋವಿಂದದಾಸ
ವಿಠ್ಠಲನಾಮ ಸ್ಮರಣೆಯನನುದಿನಬಿಟ್ಟಿರಲಾಗದು ಮನವೇ ಪ
ದುಷ್ಟ ವಚನವನು ಜಿಹ್ವೆಯೊಳೆಂದಿಗುಪಠಿಸಲು ಬೇಡವೋ ಮನವೇಅ.ಪ
ಧಾರುಣಿಯೊಳುನರಶಾರೀರದಿ ಬಂದುಕ್ರೂರ ಕೃತ್ಯಗಳ ಮಾಡದಿರುಘೋರಪಾಪಿ ಅಜಾಮಿಳನನು ಕಾಯ್ದಾನಾರಾಯಣನನು ಮರೆಯದಿರೂ1
ತಿಳಿದು ತಿಳಿದು ನೀ ಮರುಳನಾಗದಿರುಕಲಿಸಂಸಾರದಿ ಸುಖವಿಲ್ಲಾಹಳುವದಿ ಧ್ರುವನಿಗೆ ಒಲಿದ ಮಹಾತ್ಮನಸ್ಮರಿಸೈ ಕುಶಲದ ಮಾತಲ್ಲಾ2
ಕಾಲನ ಬಾಧೆಗೆ ಸಿಲುಕುವ ಕಾರ್ಯವಮೇಲು ಉಲ್ಲಾಸದಿಂದೆಸಗದಿರೂಬಾಲ ಪ್ರಹ್ಲಾದನ ಪಾಲ ನರಸಿಂಹನಲೀಲೆಯೊಳಾದರು ಮರೆಯದಿರೂ3
ದುಃಖ ಸಂತೋಷಕೆ ಹಿಗ್ಗದೆ ಕುಗ್ಗದೆರಕ್ಕಸ ವೈರಿಯ ಧೇನಿಪರೆದುಃಖಿಸೆ ದ್ರೌಪದಿ ಸೆರಗಿಗಕ್ಷಯವಿತ್ತರುಕ್ಮಿಣಿಯರಸನು ಪೊರೆವಖರೆ4
ವ್ರತನಿಷ್ಠೆಗಳೆಂಬ ನೇಮವಿದ್ಯಾತಕೊವ್ಯಥೆಯೊಂದೆದೆಯೊಳಗಿರುತಿರಲುರತಿಪತಿಪಿತಗೋವಿಂದನ ಧ್ಯಾನದಿನುತಿಸಲು ಸುಲಭ ಸಾಯುಜ್ಯಗಳೂ
*******