Showing posts with label ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ hanumesha vittala. Show all posts
Showing posts with label ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ hanumesha vittala. Show all posts

Tuesday 1 June 2021

ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ ankita hanumesha vittala

 ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ ಪ


ನಾಳೆಯೆಂದರೆ ತಾಳೊದಾಗೋದು ಭಾಳ್ಹೆಳೆಂದಿಲ್ಲಾ

ಆಳೋ ಅರಸನೇ ಅ.ಪ.


ಗಾಣ ಎಳೆಯುವ ಕ್ವಾಣನಾದೆನೋ ಕಾಣವೋ ನಯನಾ

ತ್ರಾಣ ಕಡಿಯಿತು ಗೋಣು ನಿನಗೆ ನಾ ಕಾಣಿ ಕೆಯಿನಿತ್ತೆ

ವೇಣುಗೋಪಾಲ 1


ತಾಯಿಯ ಮತಿ ಬೇರೆ ಮಾಯಾ ಮಗನಿಗೆ ನಾಯನಾಗಿರುವೆ

ಘಾಯದ ಮೇಲೆ ನೋಯಿಸುವರಯ್ಯಾ ಮಾಯಾ ಬಿಡಿಸಿ

ಕಾಯೋ ನರಹರಿ 2


ಬೇಡುವರು ಧನ ಕಾಡಿ ಎನ್ನನು ನೋಡು ಫಣಿಶಯನಾ

ರೂಢಿಯೊಳು ಕುಣಿದಾಡುತಿಹರಯ್ಯಾ

ನಾಡಿಗೊಡೆಯಾ ಕೈ ಜೋಡಿಸುವೆನಯ್ಯಾ 3


ಬೇಗ ತವದಾಸನಾಗಿ ಮಾಡಿಕೋ ಸಾಗರಶಯನಾ

ಈಗ ಭವಭಯ ನೀಗಿಸೈಯ್ಯ ಕೈ ಸಾಗದಾಯಿತು ಭಾಗವತಪ್ರಿಯಾ 4


ಆಶಾ ಬಿಡಿಸಿ ನೀ ಲೇಸು ಕೊಡು ಹನುಮೇಶವಿಠಲನೇ

ಘಾಸಿಯಾದೆನು ಪೋಷಿಸಯ್ಯ ರಮೃಶ ಪಂಢರಿವಾಸ ವಿಠಲ 5

****