..
ಚಿತ್ತಜನೈಯ ಮಿತ್ರೆರಾಡಿದ ಉತ್ರಮನಸಿಗೆ ತಂದನು ಅವರ ಉತ್ರ ಮನಸಿಗೆ ತಂದನು ಮಿತ್ರೆ ದ್ರೌಪತಿ ಸುಭದ್ರೆ ಮುಯ್ಯವಇವತ್ತೆ ತಿರುಗಿಸಿರೆಂದನು ಪ.
ಧನ್ಯ ಭಕ್ತರ ಮನೆಗ್ಹೋಗುವ ಎನ್ನ ಸನ್ಮತವೆಂದನುಮುನ್ನ ಆಲಶ್ಯವÀ ಮಾಡದೆಹೊನ್ನ ರಥ ಹೊರಗಿನ್ನು ಇಡಿಸೆಂದ1
ಕುಂತಿ ಮಕ್ಕಳು ಸಂತೋಷಿಸುವುದು ಎಂಥ ಹರುಷವಿದೆಂದನು ಎನಗ ಕಾಂತೆಯರೇರುವ ಕುದುರೆ ರಥಗಳು ಚಿಂತಾಮಣಿ ತಾ ಪಂಥವ ಗೆಲಿಸೆಂದ2
ಕಾತಿಲೆ ಐವರು ನೀತಿ ನೋಡಲು ಪ್ರೀತನಾಗುವೆÉನೆಂದನು ಭೂತಳದಿ ಕುಂತಿ ಜಾತರನ ನೋಡೋ ಆತುರದಿಒಂದೂ ಮಾತು ಸೊಗಸದು 3
ಎನ್ನ ಭಕ್ತರಿಗಿನ್ನು ಸರಿಗಾಣೆ ಧನ್ಯ ಧನ್ಯರೆಂದನು ಚನ್ನ ಪಾಂಡವರನ್ನ ನೋಡದೆಅನ್ನ ಸೊಗಸದು ಮುನ್ನ ಮಾನಿನಿ 4
ಇಂದು ಭಕ್ತರಿಗೆ ಆನಂದ ಬಡಿಸುವೆ ಸಂದೇಹಬೇಡೆಂದನು ತಂದೆ ರಮೆಯರಸು ಬಂದು ಜನಸಹಿತಮುಂದೆ ನಡೆದನು ಮೋದ ಸೂಸುತ 5
****