..
ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು ಕರುಣಿಚನ್ನಕೇಶವ ಶ್ರೀ ವೆಂಕಟಾದ್ರಿನಿಲಯ ಪ
ಎನ್ನ ತಪ್ಪುಗಳ ನಾನು ಮರೆಯಲೆಂತು ಎನ್ನಬೆನ್ನ ನೋಡಿಕೊಳ್ಳಲಹುದೆ ಎನ್ನಿಂದ ಅ
ಮಂಜು ಮರೆಯಾಗುವುದು ಮಾರ್ತಾಂಡ ಮೂಡೆಕಂಜಲೋಚನ ನಿನ್ನ ಪದಕಮಲ ಸ್ಮರಣೆರಂಜಿಸಿ ಮನವನು ಪಾರಾಗಿಪುದು ಪಾಪಗಳಅಂಜಿಕೆಯ ಬಿಡಿಸುತ ಅನುಗ್ರಹಿಪ ಕರುಣಿ 1
ದಯೆ ನಿನ್ನದಿರೆ ಭಯ ಎನಗಿಲ್ಲ ಹರಿಮಾಯೆ ಮೋಹಗಳಿಗೆ ಮರುಳಾಗಿಹ ಬೊಂಬೆಜಯವಾಗಿಸಿ ಈ ಜನ್ಮ ಕೃತಾರ್ಥವ ಮಾಡುತೋಯಜಾಕ್ಷ ಶ್ರೀ ನೆಲೆಯಾದಿಕೇಶವರಾಯ2
***