Showing posts with label ಪತಿಯ ಮಂದಿರದಲಿ ಸುಖವಾಗಿ ಬಾಳಮ್ಮ ಮತಿವಂತೆ kamalanabha vittala. Show all posts
Showing posts with label ಪತಿಯ ಮಂದಿರದಲಿ ಸುಖವಾಗಿ ಬಾಳಮ್ಮ ಮತಿವಂತೆ kamalanabha vittala. Show all posts

Thursday 5 August 2021

ಪತಿಯ ಮಂದಿರದಲಿ ಸುಖವಾಗಿ ಬಾಳಮ್ಮ ಮತಿವಂತೆ ankita kamalanabha vittala

 ..

kruti by Nidaguruki Jeevubai


ಪತಿಯ ಮಂದಿರದಲಿ ಸುಖವಾಗಿ ಬಾಳಮ್ಮ

ಮತಿವಂತೆ ಎನಿಸಿ ಸನ್ಮತಿ ಪಡೆದು ಪ


ಚತುರಳೆ ನಿನ್ನ ಸಖಿಯರೆಲ್ಲರು

ಅತಿಶಯದಿ ನಿನ್ನ ಪತಿಯ ಗುಣಗಾನ

ಕಥನ ಮಾಡುತ ನಿನ್ನೆದುರಿನಲಿ

ಸ್ತುತಿಸಿ ಹಿಗ್ಗಿ ಪೊಗಳುವರೆ ಪಾರ್ವತಿ ಅ.ಪ


ವಸತಿ ಇಲ್ಲದೆ ಸ್ಮಶಾನದಲಿ ವಾಸಿಪನೆಂದು

ಅಪಹಾಸ್ಯ ಮಾಡುವರೆ

ವಸನ ಪೀತಾಂಬರವನುಡುವುದನರಿಯದೆ

ಹಸಿಯ ಚರ್ಮವನುಡುತಿಹನೆಂಬರೆ

ಅಸನಕಿಲ್ಲದೆಗರಳ ವಿಷವನುಂಬುವನೆಂದು

ಗುಸುಗುಸು ನುಡಿಯುವರೆ

ಅಸಮನೇತ್ರನು ಭಸುಮ ಲೇಪಿಸಿ

ವೃಷಭರಾಜನ ಏರಿ ಬರುವನು

ಶಶಿಮುಖಿಯೆ ನೀನರಿಯದಲೆ ಈ

ಪಶುಪತಿಗೆ ಸತಿಯಾದೆ ಎಂಬರು 1

ಸರಿಸವತಿಯ ತನ್ನ ಸಿರಮೇಲಿರಿಸಿದಿ

ಗಿರಿಜೆ ತರವಲ್ಲ ಕೇಳೆ

ಪರಿಪರಿ ರತ್ನಾಭರಣಂಗಳರಿಯದೆ

ಉರಗಗಳ ಭೂಷಿತನಾದ ನಮ್ಮ

ಗÀರಳ ಕಂಠನಿಗೆ ನೀನರಿಯದೆ ಸತಿಯಾದೆ ಎಂದು

ತರಳರೆಲ್ಲರು ಹಾಸ್ಯ ಮಾಡುವರೆ

ಸರಸವಾಡುತ ನೋಡು ಕಂಠದಿ

ಸಿರದ ಮಾಲೆಯ ಧರಿಸಿಕೊಂಡಿಹ

ಪರಮ ಆಶ್ಚರ್ಯದಲಿ ನಾವೆಲ್ಲ

ಅರುಹಲೀಗ ಬಂದಿಹೆವು ಎನುವರು 2

ಅಂದು ಮೋಹಿನಿ ರೂಪವ ಕಂಡು

ಪರಶಿವನು ಇನ್ನೊಮ್ಮೆ ನೋಡಲು ಬೇಡೆ

ಪರಮಾತ್ಮನಾ ಸುಂದರಾಕೃತಿಯ

ನೋಡುತ ಪಿಡಿಯಲು ಪೋಗಿ

ನಂದ ಕಂದನ ರೂಪ ನೋಡಿದನು

ಹಿಂದೆ ಮೂಕಾಸುರನೆಂಬ ದೈತ್ಯನ ಕೊಲಿಸಿದ

ಇಂದಿರೇಶನಿಗೆ ಸೇವಕನಾದ ಶಿವನು

ಮಂದಗಮನೆ ಉಮೆ ಇಂದು ಶಿವನನು

ನಿಂದಿಸಿದೆವೆಂದೆನಲು ಬೇಡ ಶ್ರೀ-

ತಂದೆ ಕಮಲನಾಭ ವಿಠ್ಠಲನ

ಚಂದದಲಿ ಭಜಿಸುವನು ಎನುವರು3

***