Showing posts with label ಆವ ಲೀಲೆಯೊ gopala vittala ankita suladi ಶ್ರೀ ಕೃಷ್ಣನಸ್ತೋತ್ರ ಸುಳಾದಿ AAVA LEELEYO SRI KRISHNA STOTRA SULADI. Show all posts
Showing posts with label ಆವ ಲೀಲೆಯೊ gopala vittala ankita suladi ಶ್ರೀ ಕೃಷ್ಣನಸ್ತೋತ್ರ ಸುಳಾದಿ AAVA LEELEYO SRI KRISHNA STOTRA SULADI. Show all posts

Sunday, 8 December 2019

ಆವ ಲೀಲೆಯೊ gopala vittala ankita suladi ಶ್ರೀ ಕೃಷ್ಣನಸ್ತೋತ್ರ ಸುಳಾದಿ AAVA LEELEYO SRI KRISHNA STOTRA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ 
ಉಡುಪಿ ಶ್ರೀಕೃಷ್ಣನ ಅಭೂತೋಪಮ ಸ್ತೋತ್ರ ಸುಳಾದಿ 

 ರಾಗ ಪೂರ್ವಿಕಲ್ಯಾಣಿ 

 ಧ್ರುವತಾಳ 

ಆವ ಲೀಲೆಯೊ ನಿನ್ನ ನಾವಾವ ವರ್ನಿಪ
ದೇವ ನಿನ್ನ ನಿಜ ಸ್ವಭಾವ ಗುಣ
ಆವ ಜನುಮ ರಹಿತ ದಾವ ನೀನು ಇನ್ನು
ದೇವಕ್ಕಿ ಜಠರದಿ ಜನನವೇನೊ
ಆವ ಜಗವೆಲ್ಲ ಬಂಧಕವ ಮಾಡಿಪ್ಪ ಶಕ್ತ
ಗೋವತ್ಸ ಹಗ್ಗದಿಂದ ನೀ ವೇಗ ಸಿಕ್ಕೋದೇನೊ
ಆವ ನಿತ್ಯತೃಪ್ತನಾದವ ನೀ ಇನ್ನು ಪೋಗಿ
ಆವಾವ ಮನಿ ಬೆಣ್ಣಿ ಕದ್ದು ಮೆದ್ದದೇನು
ದೇವ ಸ್ವರಮಣನಾದ ಇನ್ನು ಪೋಗಿ
ಆವ ಗೋಪಿಕರೊಡನಾಟವು ಕ್ರೀಡೆಗಳೇನೊ
ಶ್ರೀವೈಕುಂಠ ವಾಸವಾಗಿವ ಅಪ್ರಾಕೃತನೆ
ಈ ಉಡುಪಿನಲ್ಲಿ ನೀ ಇಪ್ಪ ಬಗೆಯು ಏನೋ
ಗೋವಳರೊಡಿಯ ಗೋಪಾಲವಿಟ್ಠಲರೇಯಾ 
ನಿವಾಸ ಮಧ್ವಮುನಿ ಮಂದಿರ ಸರ್ವೇಶ ॥ 1 ॥ 

 ಮಟ್ಟತಾಳ 

ಮುಕ್ತ ಬೊಮ್ಮಾದಿಗಳು ತುತಿಸೆ ಕಾಣದೆ ಸರ್ವ -
ಶಕ್ತರಲ್ಲವೆಂದು ಸುಮ್ಮನಿರುವದೇನು
ಸೊಕ್ಕಿನಿಂದಲಿ ಗೋಮಕ್ಕಳ ಕೈಯಿಂದ
ಭಕ್ತವತ್ಸಲನೆ ಬಯ್ಸಿ ಕೊಂಡದದೇನು
ಮುಕ್ತಿಪ್ರದಾತನೆ ನಿನಗೆ ಯಮುನಾದೇವಿ
ಘಕ್ಕನೆ ಮಾರ್ಗವನಿತ್ತಳೆಂಬೋದೇನೊ
ಮುಕ್ತ ನಿಯಾಮಕನೆ ನೀ ಕೌರವ ಸಭೆಗೆ
ಚಕ್ಕನೆ ಸಂಧಾನಕ್ಕಿನ್ನು ಪೋದದು ಏನೋ
ಭಕ್ತವತ್ಸಲ ಕೃಷ್ಣಾ ಗೋಪಾಲವಿಟ್ಠಲ 
ಮಕ್ಕಳಾಟಿಕೆ ನಿನ್ನ ಮಹಿಮೆಗೆ ನಮೋ ನಮೊ ॥ 2 ॥ 

 ತ್ರಿವಿಡಿತಾಳ 

ಅಂಗನೆ ದ್ರೌಪದಿಗಕ್ಷಯ ವಸನವು
ಹಿಂಗದೆ ಇತ್ತಂಥ ಹಿತ ದೈವವೆ
ಶೃಂಗಾರಾದಿ ಪುರದ ರಜಕನ್ನ ಬಿಡದಲೆ
ಭಂಗ ಬಡಿಸಿ ವಸ್ತ್ರನುಟ್ಟುಕೊಂಡಿದ್ದು ಏನೊ
ಹಿಂಗದೆ ಅಜಭವರಿನ್ನು ಅರ್ಚಿಸಲಾಗಿ
ಕುಂಗಿದ್ದ ಕುಬುಜಿ ಅರ್ಚನಿಗೆ ಮೆಚ್ಚಿದ್ದದೇನೋ
ಅಂಗನೆ ಲಕುಮಿ ಅಲಂಕರಿಸುತಲಿರೆ
ರಂಗ ಪೂಗಾರನ ಮಾಲೆ ಕೊಂಡದು ಏನೊ
ತುಂಗಮಹಿಮ ಗೋಪಾಲವಿಟ್ಠಲ ಕೃಷ್ಣ
ಡಿಂಗರಿಗರ ಪ್ರೀಯ ದೀನಜನರ ಬಂಧು ॥ 3 ॥ 

 ಅಟ್ಟತಾಳ 

ದುಃಖ ಸಾಗರದ ಸಿಕ್ಕು ಬಿಡಿಪನೆ ದೇ -
ವಕ್ಕೀಯ ಶರಿಯ ಬಿಡಿಸಿದನೆಂಬುವದೇನೋ
ಅಕ್ಕರದಲಿ ವದನ ತೆರೆದು ಇನ್ನು
ಘಕ್ಕನೆ ಹದಿನಾಲ್ಕು ಲೋಕ ತೋರಿದನೆ ಗೋ -
ಮಕ್ಕಳ ಕೂಡಾಡಿ ಅಡಿಗಿ ಕೊಂಬುವದೇನೊ
ಮುಖ್ಯ ಮುಕುತರು ನಿನ್ನನ್ನು  ಕೊಂಡಾಡುತ್ತಲಿರೆ
ಉಖ್ಖಾ ಅಮ್ಮಾ ಎಂದು ಅಕ್ಕೆ ಮಾಡಿದದೇನೊ
ಭಕ್ತವತ್ಸಲ ದೇವ ಗೋಪಾಲವಿಟ್ಠಲ ವಿ -
ರಕ್ತರ ಮನದಲ್ಲಿ ಬಿಡದೆ ಇಪ್ಪುವ ಸ್ವಾಮಿ ॥ 4 ॥ 

 ಆದಿತಾಳ 

ಜಾರ ಚೋರ ದೋಷಗಳು ಆರು ಆರು ಮಾಡಿ ನಿನ್ನ
ಸಾರಿ ತುತಿಸಿ ಸಾರೆ ಅವರಾಪಾರ ಓಡವು
ಜಾರ ಚೋರ ಗುಣಗಳೆಲ್ಲ ನಿನಗೆ ಒಪ್ಪಿತಯ್ಯಾ ಸರ್ವ
ಕಾರಣಕ್ಕೆ ನೀನೆ ಮುಖ್ಯ ಕಾರಣಾದ ಕಾರಣವು 
ಮಾರುತೀಶ ಚಲುವ ಗೋಪಾಲವಿಟ್ಠಲರೇಯಾ 
ಆರು ಬಲ್ಲರಯ್ಯಾ ನಿನ್ನಪಾರ ಮಹಿಮೆ ಪೂರಣವು ॥ 5 ॥ 

 ಜತೆ 

ಉಡುಪಿನ ವಾಸ ಶ್ರೀಕೃಷ್ಣ ಗೋಪಾಲವಿಟ್ಠಲ 
ಬಿಡದೆ ನಂಬಿಸೊ ನಿನ್ನ ಚರಣ ಕಮಲವ ॥

ಆವ ಲೀಲೆಯೊ ನಿನ್ನ ನಾನಾವ ವರ್ನಿಪ.... 
 ಉಡುಪಿ ಶ್ರೀಕೃಷ್ಣನ ಸ್ತೋತ್ರ ಸುಳಾದಿ ,
ಶ್ರೀ ಗೋಪಾಲದಾಸರ ರಚನೆ , ರಾಗ ಪೂರ್ವಿಕಲ್ಯಾಣಿ

for lyrics in pdf please click
             AAVA LEELEYO  

*************