Showing posts with label ಎಂಥ ದಯವಂತನೋ ಮಂತ್ರ ಮುನಿನಾಥನೊ shyamasundara ENTHA DAYAVANTANO MANTRA MUNI NAATHANO. Show all posts
Showing posts with label ಎಂಥ ದಯವಂತನೋ ಮಂತ್ರ ಮುನಿನಾಥನೊ shyamasundara ENTHA DAYAVANTANO MANTRA MUNI NAATHANO. Show all posts

Friday, 31 December 2021

ಎಂಥ ದಯವಂತನೋ ಮಂತ್ರ ಮುನಿನಾಥನೊ ankita shyamasundara ENTHA DAYAVANTANO MANTRA MUNI NAATHANO

VIVARDHINI MADHU RAO 9 YEARS 2022 
and chaitra suresh rao in Dallas Texas USA 

on ರಾಘವೇಂದ್ರ 

ಎಂಥ ದಯವಂತನೋ | ಮಂತ್ರ ಮುನಿನಾಥನೊ
ಸಂತಸದಿ ತನ್ನನು | ಚಿಂತಿಪರಿಗೆ ಸುರಧೇನು ಪ

ವರ ಪ್ರಹ್ಲಾದನು | ಮರಳಿ ಬಾಹ್ಲೀಕನು |
ಶ್ರೀ ಗುರುವ್ಯಾಸರಾಯನೊ | ಪರಿಮಳಾಚಾರ್ಯನೊ 1

ಇರುವ ತುಂಗಾತಟದಲ್ಲಿ | ಬರುವ ತಾನು ಕರೆದಲ್ಲಿ
ಕರಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ 2

ಮರುತಾವೇಶಯುಕ್ತನು | ದುರಿತ ಕಳೆವ ಶಕ್ತನು
ತರಣಿ ನಿಭಗಾತ್ರನು | ಪರಮಸುಚರಿತ್ರನು 3

ಶಿಶುವಿಗವುಗರೆದನು | ವಸುಧಿ ಸುರರ ಪೊರೆವನು
ಅಸಮ ಮಹಿಮನೊ | ಸುಶೀಲೇಂದ್ರ ವರದನೊ 4

ಭೂಮಿಯೊಳು ಖ್ಯಾತನು | ಶಾಮಸುಂದರ ಪ್ರೀತನು
ಕಾಮಿತಾರ್ಥದಾತನು | ಸ್ವಾಮಿ ನಮಗೆ ಈತನು 5
*******

ರಾಗ : ಹಿಂದೋಳ (raga, taala may differ in audio)
ರಾಗ : ದುರ್ಗಾ ತಾಳ : ಆದಿ

ಎಂಥ ದಯವಂತನೋ 
ಮಂತ್ರಮುನಿ ನಾಥನೋ ।
ಸಂತತದಿ ತನ್ನನು 
ಚಿಂತಿಪರಿಗೆ ಸುರಧೇನು ।। ಪಲ್ಲವಿ ।।

ವರ ಪ್ರಹ್ಲಾದನೂ 
ಮರಳಿ ಬಾಹ್ಲೀಕನೋ ।
ಗುರು ವ್ಯಾಸರಾಯನೋ 
ಪರಿಮಳಾಚಾರ್ಯನೋ ।। ಚರಣ ।।

ಇರುವ ತುಂಗಾ ತಟದಲ್ಲಿ 
ಬರುವ ತಾನು ಕರೆದಲ್ಲಿ ।
ಕರವ ಪಿಡಿದು ಪೊರೆವಲ್ಲಿ 
ಸರಿಗಾಣೆ ಧರೆಯಲ್ಲಿ ।। ಚರಣ ।।

ಮರುತಾವೇಶಯುಕ್ತನು 
ದುರಿತ ಕಳೆವ ಶಕ್ತನು ।
ತರಣಿ ನಿಭಗಾತ್ರನು 
ಪರಮ ಸುಚರಿತ್ರನು ।। ಚರಣ ।।

ಶಿಶುವಿಗಸುವಗರೆದನು 
ವಸುಧಿ ಸುರರ ಪೊರೆದನು ।
ಅಸಮ ಮಹಾ ಮಹಿಮನೋ
ಸುಶೀಲೇಂದ್ರ ವರದನೋ ।। ಚರಣ ।।

ಭೂಮಿಯೊಳು ಖ್ಯಾತನು 
ಶ್ಯಾಮಸುಂದರ ಪ್ರೀತನು ।
ಕಾಮಿತಾರ್ಥದಾತನು 
ಸ್ವಾಮಿ ನಮಗೆ ಈತನು ।। ಚರಣ ।।
******