Showing posts with label ನೊಂದು ಸಂಸಾರದೊಳಗೊಂದಿಸುವೆನೋ ಇಂದು vijaya vittala. Show all posts
Showing posts with label ನೊಂದು ಸಂಸಾರದೊಳಗೊಂದಿಸುವೆನೋ ಇಂದು vijaya vittala. Show all posts

Wednesday, 16 October 2019

ನೊಂದು ಸಂಸಾರದೊಳಗೊಂದಿಸುವೆನೋ ಇಂದು ankita vijaya vittala

ವಿಜಯದಾಸ
ನೊಂದು ಸಂಸಾರದೊಳಗೊಂದಿಸುವೆನೋ ಇಂದು
ಮಾಧವ ಯಾದವ ಪ

ಕರುಣಬಾರದೆ ನಿನಗೆ ಅಕಟಕಟ ಅಕಟಕಟ
ಶರಣ ನಾ ನಿನಗಲ್ಲವೇ ಸ್ವಾಮಿ ನಿನ್ನ
ಮೊರೆಹೊಕ್ಕೆ ಸರ್ವಾಂತರ್ಯಾಮಿ-ಎನ್ನ
ಎರವು ಮಾಡುವರೇನೋ ಪ್ರೇಮಿ-ಇನ್ನು
ಪರಿಹರಿಸು ಸಂಚಿತಾಗಾಮಿ-ಇದೇ
ಸರಿಯೇನೊ ಜಗದೊಳಗೆ ಭಕುತವತ್ಸಲನೆಂಬ
ಬಿರುದು ಪೊಳ್ಳಾಗದೇನೊ ನಿರುತ ಖ್ಯಾತ1

ಸತತ ಸುಖವುಳ್ಳರೆ ಬಾಯ್ದೆರೆದು ಪಲ್ಗಿರಿದು
ನುತಿಸಿ ಬೇಡಿಕೊಂಬೆನೇ ನಿನ್ನ- ಮುಂದೆ
ಗತಿಯ ಕಾಣದಲೆ ಚಾಲ್ವರಿದೆ ಭೇದ-
ಮತಿ ಕೊಡದೆ ನೋಡುವುದು ಬರಿದೆ-ಸರ್ವ
ಕ್ಷಿತಿಯೊಳಗೆ ನೀನೆಂದು ಅರಿದೆ-ವರ-
ತತುವ ನಿಯ್ಯಾಮಕರ ಬಳಿ ಪಿಡಿದು ನಿನ್ನಂಘ್ರಿ
ಶತಪತ್ರ ತೋರಿಸೈಯ್ಯಾ ಜೀಯಾ 2

ಶೃತಿಶಾಸ್ತ್ರ ಪೌರಾಣ ಭಾರತ ರಾಮಾಯಣ
ಇತಿಹಾಸ ಪಾಂಚರಾತ್ರ ನಿಗಮ-ನಿನ್ನ
ತುತಿಪ ಭಕುತರಿಗೆ ತಲೆಬಾಗಿ-ಕೊಂಡು
ಪ್ರತಿದಿವಸದಲಿ ಚೆನ್ನಾಗಿ-ವಲಿದು
ಅತಿಶಯವ ಕೊಡುತ ಲೇಸಾಗಿ-ವಿಘ್ನ
ತತಿಕಳೆದು ನೀ ಬಂದು ಸಾರೆ ಬೆರಗಾಗುತಿದೆ
ಪತಿತಿ ಪಾವನ ಮೋಹನ-ಚೆನ್ನ3

ತಡವ್ಯಾಕೆ ಗುಣಕಾಲ ಕರ್ಮದೇಶಗಳೆಲ್ಲ
ವಡೆಯ ಎನ್ನಾಧೀನವೇ ಪೇಳೊ-ದು:ಖ
ಬಿಡಿಸುವುದು ನಿನಗುಚಿತವಲ್ಲ-ಪಾಟು
ಸಿರಿ ಲಕುಮಿನಲ್ಲ-ಒಂದು
ನುಡಿವೆ ನಾನಾಂತರ್ಯ ಸೊಲ್ಲ-ಇಂತು
ಕಡೆಮಾಡಿ ನೋಡದಿರು ದಿವಸ ಹಿಂದಾಗುತಿದೆ
ಬಡವರಾಧಾರಿ ಕರುಣೀ-ದಾನಿ4

ಧ್ರುವನು ನಭದೊಳು ಇಲ್ಲಿ ರಾವಣಾನುಜ ಅಧೋ
ಭುವನದಲಿ ಬಲಿರಾಯನ ನೋಡಿ, ನಾನು
ತವಪಾದ ಗತಿಯೆಂದು ಬಂದೆ-ಮಹಾ
ಭವಣೆ ಬಟ್ಟೆನೊ ಕೇಳು ಹಿಂದೆ-ಜಗದಿ
ತ್ರಿವಿಧ ತಾಪಗಳಿಂದ ನೊಂದೆ-ಈ
ಅವಸರಕೆ ಬಂದೊದಗಿ ನಿನ್ನ ನಾಮಾಮೃತದ
ಸವಿದೋರೊ ದ್ವಾರಾವತಿಯ-ಜೀಯ 5

ಅಂಧಕೂಪದಲಿ ಬಿದ್ದವನ ನೋಡಿ ನಿನಗೆ ಚ
ಕ್ಕಂದವಾಗಿದೆಯೊ ಕಾಣೆ-ನಾನು
ಸಂದೇಹ ದ್ವೇಷದವನಲ್ಲ-ಇದು
ಎಂದೆಂದಿಗೂ ಪುಸಿಯು ಅಲ್ಲ-ಹೃದಯ-
ಮಂದಿರದೊಳು ಬಲ್ಲೆಯೆಲ್ಲ-ಸ್ವಾಮಿ
ನೊಂದು ಕೂಗಿದರೆ ಎಳೆಗಂದಿಯೆಂಬಾ ಮಾತು
ಇಂದು ಎತ್ತಲಿ ಪೋಯಿತೋ ತಾತ-ನೀತ 6

ಗುಣವಂತ ಬಲವಂತ ಜಯವಂತ ಸಿರಿವಂತ
ಘನವಂತ ಧೈರ್ಯವಂತ ಶ್ರೀಕಾಂತ-ಎನ್ನ
ಮನದ ದುಮ್ಮಾನವನೆ ಬಿಡಿಸೊ-ನಿನ್ನ
ಅನವರತ ನಾಮವನು ನುಡಿಸೊ-ಮಧ್ವ
ಮುನಿ ಕರುಣ ಕವಚವನು ತೊಡಿಸೊ-ಇದೇ
ಜನುಮ ಜನುಮಕೆ ಬೇಡಿಕೊಂಬೆ-ಶರಣೆಂಬೆ
ಪ್ರಣತ ಹೃದಯಾಬ್ಜ ತುಂಬೆ-ಕಾಂಬೆ 7

ಮಾನಸ್ನಾನವನುಂಡು ಮತಿಗೆಟ್ಟ ಪೂರ್ಣ ವಿ
e್ಞÁನಮಯನೆ ನಿನ್ನ ಮರೆದೆ-ಕರ್ಮ
ಪ್ರಾಣೇಂದ್ರಿಯಂಗಳು ನಿನ್ನ ವಶವೊ-ಇಂಥ
ಜಾಣತನ ಬಹಳ ಸಂತಸವೊ-ಹೀಗೆ
ಮಾಣದಲೆ ಇಪ್ಪ ಸಾಹಸವೋ ಚನ್ನ
e್ಞÁನ ಭಕುತಿ ವಿರಕುತಿ ಕೊಟ್ಟು
ನಿನ್ನವರೊಳಾನಂದದಲಿ ನಿಲ್ಲಿಸೈಯ್ಯ ಜೀಯ 8

ಶಂಖ ಚಕ್ರ ವರಾಭಯ ಹಸ್ತದಲಿ ನಿಂದ
ವೆಂಕಟಾಚಲ ನಿವಾಸ ಶ್ರೀಶ-ನಿನ್ನ
ಕಿಂಕರನ ಕಿಂಕರನೊ ನಾನು-ಅಕ-
ಳಂಕ ಮನುಜನ ಮಾಡೊ ನೀನು-ಭವ
ಸಂಕಟವ ಕಳೆಯಾ ಸುರಧೇನು-ಬೊಮ್ಮ
ವಿನುತ ವಿಜಯವಿಠ್ಠಲ ಹರಿ-
ಣಾಂಕ ಸೌವರ್ಣ ಪೂರ್ಣ ಸಂಪೂರ್ಣ 9
*********