Showing posts with label ನೋವು ತಾಳಲಾರೆ ಹರಿಯೇ ಕಾವುದೆನ್ನನು hanumesha vittala. Show all posts
Showing posts with label ನೋವು ತಾಳಲಾರೆ ಹರಿಯೇ ಕಾವುದೆನ್ನನು hanumesha vittala. Show all posts

Tuesday, 1 June 2021

ನೋವು ತಾಳಲಾರೆ ಹರಿಯೇ ಕಾವುದೆನ್ನನು ankita hanumesha vittala

ನೋವು ತಾಳಲಾರೆ ಹರಿಯೇ ಕಾವುದೆನ್ನನು

ಕರುಣಾಳು ದೊರೆಯೆ

ಸೇವಕನ ಕೈ ಬಿಡುವುದು ಸರಿಯೇ ಮಾವನಾ ಕೊಂದ

ಕೃಷ್ಣಮೂರುತಿಯೆ ಪ


ಕಣ್ಣುಗಳಿಗೆ ಕಾಣದ ನೋವು ಸಣ್ಣಾಗಿ ನೋಯಿಸುವಂಥ ನೋವು

ಹುಣ್ಣು ಘಾಯವು ಇಲ್ಲದ ನೋವು ಎಣಿಕೆ

ಇಲ್ಲದ ಬಾಧಿಪ ನೋವು 1


ಬಡವನಾಗಿ ನಾ ಬಳಲುವ ನೋವು ಪಡೆದವರಿಗೆ

ಬ್ಯಾಡದ ನೋವು

ಮಡದಿ ಮಕ್ಕಳು ಕಾಡುವ ನೋವು ಪಡೆದ ಕರ್ಮದ

ಫಲವುಂಬೋ ನೋವು 2


ವಿದ್ಯಾಬುದ್ಧಿಗಳಿಲ್ಲದ ನೋವು ಕದ್ದು ಪರಧನ ತಂದಂಥ ನೋವು

ಶುದ್ಧವಿಲ್ಲದ ಮನಸಿನ ನೋವು ಇದ್ದ ಋಣವನು ತೀರಿಸದ ನೋವು 3


ಕೊಟ್ಟ ದಾನವ ಕಸಗೊಂಡ ನೋವು ಶ್ರೇಷ್ಠ ನಾನೆಂಬೊ

ಗರ್ವದ ನೋವು

ಶ್ರೇಷ್ಠ ದಾಸರ ಹಳಿದಂಥ ನೋವು ದುಷ್ಟ ಜನರ

ಕೊಂಡಾಡಿದ ನೋವು 4


ದಾನಧರ್ಮವ ಮಾಡದ ನೋವು ಮೌನ ವ್ರತಗಳ

ಬಿಟ್ಟಂಥ ನೋವು

ಹೀನ ಬುದ್ಧಿಯ ಹೆಚ್ಚಾದ ನೋವು ಹನುಮೇಶ

ವಿಠಲನ ನೆನೆಯದ ನೋವು 5

***

nOvu tALalAre hariye l

kAyO emmanu karuNALu doreye l

sEvakana kai biDuvudu sariye l

mAvana konda kriShNa mUrutiye ll

kaNNugaLige kANada nOvu l

saNNAgi nOyisuvanta nOvu l

huNNugAyavu illada nOvu l

eNike illade BAdhipa nOvu ll

baDavanAgi baLaluva nOvu l

haDedavarige bEDAda nOvu l

maDadi makkaLu kADuva nOvu l

paDeda karmada PalavembO nOvu ll

dAna dharmava mADada nOvu l

maunavratangaLa biTTantha nOvu l

heenabuddi hecchAda nOvu l

hanumEShaviThalana neneyada nOvu ll

***