Showing posts with label ಜಯ ಮಂಗಳಂ ಶುಭ ಮಂಗಳಂ ಸುಮಂಗಳಂ ರಘುವರಗೆ shyamasundara. Show all posts
Showing posts with label ಜಯ ಮಂಗಳಂ ಶುಭ ಮಂಗಳಂ ಸುಮಂಗಳಂ ರಘುವರಗೆ shyamasundara. Show all posts

Wednesday 1 September 2021

ಜಯ ಮಂಗಳಂ ಶುಭ ಮಂಗಳಂ ಸುಮಂಗಳಂ ರಘುವರಗೆ ankita shyamasundara

 ..

ಜಯಮಂಗಳಂ ಶುಭ ಮಂಗಳಂ

ಸುಮಂಗಳಂ ರಘುವರಗೆ

ದಯಾವಾರಿನಿಧಿ ಮುರುಹರಗೆ

ನರಸಾರಧಿ ಗಿರಿಧರ ಮಾಧವಗೆ | ಶೌರಿ

ರವಿನಿಭಾಂಗ ಕೃಪಾನಿಧಿಗೆ | ದುರಿತಾನಲ

ಫಣಿವನಮಾಲೆಯ ಶುಭದಾಯಕಗೆ

ದಯವಾರಿಧಿ ಮುರಹರಗೆ 1


ನಿಗಮಾಗಮ ಸನ್ನುತ ಶ್ರೀಧರಗೆ

ದೂರೀಕೃತದೋಷ ನಿರಾಮಯಗೆ

ನಗಜಪತಿ ಪಾಲಕ ದೇವಕಿ ಸುತಗೆ

ದಯವಾರಿಧಿ ಮುರಹರಗೆ 2


ಅಮರಾದಿಪವಿನಮಿತ ಮೂರುತಿಗೆ

ಭಾಮೆ ನವಮೋದ ಪ್ರದಾಯಕಗೆ

ಸ್ವಾಮಿ ಶ್ರೀನಿಧಿ ಶಾಮಸುಂದರ ಧೊರೆಗೆ

ದಯವಾರಿಧಿ ಮುರಹರಗೆ 3

***