Showing posts with label ಏನಿದು ಚಂದ ಹರಿಯೆ ಮುಕುಂದ gadugina veeranarayana. Show all posts
Showing posts with label ಏನಿದು ಚಂದ ಹರಿಯೆ ಮುಕುಂದ gadugina veeranarayana. Show all posts

Wednesday, 1 September 2021

ಏನಿದು ಚಂದ ಹರಿಯೆ ಮುಕುಂದ ankita gadugina veeranarayana

..

kruti by ವೀರನಾರಾಯಣ Veeranarayana 


ಏನಿದು ಚಂದ ಹರಿಯೆ ಮುಕುಂದ ಪ


ಒದಗಿದ ಬಾಧೆಯ ಬಿಡಿಸಲು ಬೇಡಲುತುದಿಕೆಳಸುವ ತನಕ ಹಾನಿಯ ಕಾಯ್ವುದು 1


ಕುರು ಸಭೆಯೊಳು ಮಾನವನುಳಿಸೆಂದುತರುಣಿ ಬಾಯ್ದೆರೆ ಬೇಗ ಬಾರೆಂದು 2


ಮಕರಿಯ ಹಿಡಿತವ ಬಿಡಿಸಲು ಕರಿನೃಪಮುಖವೆತ್ತಿ ಮೊರೆಯುತೆ ಜವದಿ ಪೊರೆಯುವುದು 3


ತಡಮಾಡದೆ ಶರಣರ ರಕ್ಷಿಸದೆಚಡಪಡಿಸುವುದನು ನೋಡುತಲಿರುವುದು 4


ಮೊರೆಯಿಡೆ ಭಕುತರ ಪೊರೆಯಯ್ಯ ಜವದಲಿಕರುಣಿಸು ಗದುಗಿನ ವೀರನಾರಾಯಣ 5

***