Showing posts with label ಆವ ಜನುಮದ ಪುಣ್ಯ tande varadagopala vittala suladi ಇಭರಾಮಪುರ ಅಪ್ಪಾವರ ಮೇಲೆ ಸುಳಾದಿ. Show all posts
Showing posts with label ಆವ ಜನುಮದ ಪುಣ್ಯ tande varadagopala vittala suladi ಇಭರಾಮಪುರ ಅಪ್ಪಾವರ ಮೇಲೆ ಸುಳಾದಿ. Show all posts

Sunday, 8 December 2019

ಆವ ಜನುಮದ ಪುಣ್ಯ tande varadagopala vittala suladi ಇಭರಾಮಪುರ ಅಪ್ಪಾವರ ಮೇಲೆ ಸುಳಾದಿ

ತಂದೆ ವರದ ಗೋಪಾಲ ವಿಠ್ಠಲರು ರಚನೆ ಮಾಡಿದ ಸುಳಾದಿ.
ಶ್ರೀ ಇಭರಾಮಪುರ ಅಪ್ಪಾವರ ಮೇಲೆ 

ಮಟ್ಟತಾಳ

ಆವ ಜನುಮದ ಪುಣ್ಯ ಫಲಿಸೀತು ಇಂದು ನಿನಗೆ|
ಕಾವುತನಾಗಿದ್ದೆ ಕೃಷ್ಣಾರ್ಯರ ಕಂಡೆ
ಈ ಮುನಿಯು ನಿಜವಾಗಿ ದೇವಾಂಶರಾರು ಎಂಬೋ|
ಜ್ಞಾನ ಪುಟ್ಟಿದುದಕೆ ಸಾಧಿಸಿಕೊ ನಿನಗೆ ಇದೆ|
ಘನ್ನವಾದ ಸಾಧನವೆಂದು ತಿಳಿದು ನಿನ್ನಿಂದ|
ನೀನೇ ಹಿಗ್ಗಿ ಕುಗ್ಗಾದಿರು ಮಗ್ಗುಲೊಳಗಿದ್ದ|
ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ|.
ಮಧ್ವರಾಯರ ಪಾದ ಪದ್ಮದಲ್ಲಿ ಬುದ್ದಿ ಯನಿಟ್ಟರೆ ಬಾಧೇಯ ತಪ್ಪಿಸಿ| 
ಉದ್ದರಿಸುವ ಮುದ್ದು ಮುಖದ 
ತಂದೆ ವರದ ಗೋಪಾಲ ವಿಠ್ಠಲ ರೇಯಾನಾ ವಲಿಸು ಬಿಡದೆl
*********