Showing posts with label ಮಂತ್ರ ಮಂದಿರ ವಿಹಾರಾ ಸದ್ಗುರುವರಾ tandevenkatesha vittala. Show all posts
Showing posts with label ಮಂತ್ರ ಮಂದಿರ ವಿಹಾರಾ ಸದ್ಗುರುವರಾ tandevenkatesha vittala. Show all posts

Thursday 5 August 2021

ಮಂತ್ರ ಮಂದಿರ ವಿಹಾರಾ ಸದ್ಗುರುವರಾ ankita tandevenkatesha vittala

  ..

ರಾಗ : ಬಿಲಹರಿ  ತಾಳ : ತ್ರಿಪುಟ


ಮಂತ್ರಮಂದಿರ ವಿಹಾರಾ ಸದ್ಗುರುವರಾ ।। ಪಲ್ಲವಿ ।।


ತಂತ್ರಸಾರ ವಿಧ್ಯುಕ್ತ ಧಾರ್ಮಿಕ ।

ಯಂತ್ರಕರಣದಿ ಹೃಸ್ಥಳದಿ । ಸರ್ವ ।

ತಂತ್ರ ನಿಪುಣನ ಬಂಧಿಸುತ । ಧ ।

ನ್ವಂತ್ರಿಯೆನಿಸಿದ ಗ್ರಂಥಕರ್ತೃಕ ।। ಅ ಪ ।।


ಕಾವ ಕರುಣಿ ಕೃಪಾವಲೋಕನದೀ ನೋಡೆನ್ನ ದಯದೀ ।

ಭಾವಶುದ್ಧ ಜನಾವನತಪದ ಪಾವನಾತ್ಮಕ ದೇವ ಶರಣ । ಸಂ ।

ಜೀವ ರಾಮ ರಾಜೀವ ಪದಯುಗಳಾವಲಂಬನಕಾ ವಿಪಶ್ಚಿತ ।

ಕೋವಿದನೆ ಮಹಿಮಾವನಧಿ ತವ ಸೇವೆಯನು ಕೊಡು ಭಾವುಕಾಗ್ರಣೀ ।। ಚರಣ ।।

ಗಂಗಾ ಜನಕ ನೃಸಿಂಗ ಚರಣ ಸುಮ ಪೀಯೂಷ ಕಾಮ ।

ತುಂಗ ವಿಮಲ ತರಂಗಿಣೀ ತಟ ರಂಗಚರ ಮಹಿತಾಂಗ ಸ್ಮರಶರ ।

ಭಂಗ ಕೀರ್ತಿತ ತರಂಗ ಹರಿಮತ ಸಂಗ ಯತಿಕುಲ ಪುಂಗವನೇ । ಸ ।

ತ್ಸಂಗದಲಿ ಪೋರ್ ಕಂಗೊಳಿಸುತ ವಿಹಂಗ ಹಯ ಪದ ಭೃಂಗ ಬುಧವರ ।। ಚರಣ ।।

ಶಕ್ತ ವಿಧಿ ವಚನೋಕ್ತ ದಿನಚರ್ಯ ವೈಷ್ಣವಾಚಾರ್ಯ ।

ಭಕ್ತ ಜನಕಭಿವ್ಯಕ್ತನಾಗಿ ವಿಧ್ಯುಕ್ತ ಧರ್ಮಾಸಕ್ತತೆಯ । ಕೊ ।

ಟ್ಟುಕ್ತಿ ಸಲಿಪ ಪ್ರಯುಕ್ರ ಮಂತ್ರಸುವ್ಯಕ್ತ ವೇಶ್ಮಾತಿಸಿಕ್ತ  ಮಹಿಮ । ವಿ ।

ರಕ್ತ ಭವಭಯಮುಕ್ತ ರಾಜಿತ ಭಕ್ತಿಮುದ್ರಾಯುಕ್ತ ಸೇವಿತ ।। ಚರಣ ।।

ಓ ಮಹಾಮರಧೇನು ಸುರತರುವೇ ಕರ ಮುಗಿದು ಕರೆವೇ ।

ರಾಮ ವ್ಯಾಸ ಸುತಾಮರಸ ಸರಸೀಮರಾಳ ಸುತ್ರಾಮವಿಭವ ।

ಸ್ತೋಮಸಮ ಮಂತ್ರಧಾಮ ನಿಲಯನೆ ಕಾಮಿತಪ್ರದ } ಶ್ರೀ ಮಹಾ ಮಹಿ ।

ಮಾಮಹಿತನಾಗಾಯಾದ್ಭಯ ಕ್ಷೇಮಗೈವ ಸಪ್ರೇಮ ನಾಮವೇ ।। ಚರಣ ।।

ಮಂದಭಾಗ್ಯರ ಮುಂದೆ ತರಲಿರುವ ಕರೆದಲ್ಲಿ ಬರುವಾ ।

ಹಿಂದೆ ಮೊದಲೆರಡಂದು ದ್ವಾಪರದಿಂದೀಕಡೆಯಲಿ ಸಂದ । ಜನ್ಮಗ ।

ಳಿಂದ ಧ್ಯಾನಾನಂದ ಪೂರಿತ ಬಂದವರಿಗವರೆಂದು ವರಗಳ ।

ಬೃಂದ  ಸಲಿಪ ಯತೀಂದ್ರ ತೋರಿಸೋ ತಂದೆ ವೇಂಕಟೇಶ ವಿಠ್ಠಲನ ।। ಚರಣ ।।

****


ರಾಗ: ಬಿಲಹರಿ ತಾಳ: ತ್ರಿಪುಟ

ಮಂತ್ರಮಂದಿರ ವಿಹಾರಾ ಸದ್ಗುರುವರಾ


ತಂತ್ರಸಾರ ವಿಧ್ಯುಕ್ತಧಾರ್ಮಿಕ 

ಯಂತ್ರಕರಣದಿ ಹೃಸ್ಥಳದಿ ಸರ್ವ- 

ತಂತ್ರನಿಪುಣನ ಬಂಧಿಸುತ ಧ-

ನ್ವಂತ್ರಿಯೆನಿಸಿದ ಗ್ರಂಥಕರ್ತುಕ ಅ.ಪ


ಕಾವಕರುಣಿ ಕೃಪಾವಲೋಕನದೀ ನೋಡೆನ್ನ ದಯದೀ

ಭಾವಶುದ್ಧ ಜನಾವನತಪದ ಪಾವನಾತ್ಮಕ ದೇವಶರಣಸಂ-

ಜೀವ ರಾಮರಾಜೀವಪದಯುಗಳಾವಲಂಬನಕಾ ವಿಪಶ್ಚಿತ 

ಕೋವಿದನೆ ಮಹಿಮಾವನಧಿ ತವಸೇವೆಯೆನು ಕೊಡು ಭಾವುಕಾಗ್ರಣಿ 1

ಗಂಗಾಜನಕ ನೃಸಿಂಗಚರಣಸುಮ ಪೀಯೂಷಕಾಮ 

ತುಂಗವಿಮಲತರಂಗಿಣೀತಟರಂಗಚರ ಮಹಿತಾಂಗ ಸ್ಮರಶರ 

ಭಂಗ ಕೀರ್ತಿತತರಂಗ ಹರಿಮತ ಸಂಗ ಯತಿಕುಲ ಪುಂಗವನೆ ಸ-

ತ್ಸಂಗದಲಿ ಪೊರೆ ಕಂಗೊಳಿಸುತ ವಿಹಂಗಹಯಪದ ಭೃಂಗ ಬುಧವರ 2

ಶಕ್ತ ವಿಧಿವಚನೋಕ್ತದಿನಚರ್ಯ ವೈಶ್ಣವಾಚಾರ್ಯ 

ಭಕ್ತಜನಕಭಿವ್ಯಕ್ತನಾಗಿ ವಿದ್ಯುಕ್ತಧರ್ಮಾಸಕ್ತತೆಯ ಕೊ-

ಟ್ಟುಕ್ತಿ ಸಲಿಪ ಪ್ರಯುಕ್ತ ಮಂತ್ರಸುವ್ಯಕ್ತ ವೇಶ್ಮಾತಿಸಿಕ್ತಮಹಿಮ ವಿ- 

ರಕ್ತ ಭವಭಯಮುಕ್ತ ರಾಜಿತ ಭಕ್ತಿಮುದ್ರಾಯುಕ್ತ ಸೇವಿತ 3

ಓ ಮಹಾಮರಧೇನು ಸುರತರುವೇ ಕರ ಮುಗಿದು ಕರೆವೇ 

ರಾಮ ವ್ಯಾಸಸುತಾಮರಸಸರಸೀಮರಾಳ ಸುತ್ರಾಮವಿಭವ 

ಸ್ತೋಮಸಮ ಮಂತ್ರಧಾಮ ನಿಲಯನೆ ಕಾಮಿತಪ್ರದ ಶ್ರೀ ಮಹಾಮಹಿ 

ಮಾಮಹಿತನಾಗಾಮಯಾದ್ಭಯ ಕ್ಷೇಮಗೈವ ಸಪ್ರೇಮನಾಮನೆÂೀ 4

ಮಂದಭಾಗ್ಯರ ಮುಂದೆ ತರಲಿರುವ ಕರೆದಲ್ಲಿ ಬರುವಾ 

ಹಿಂದೆ ಮೊದಲೆರಡಂದು ದ್ವಾಪರದಿಂದೀಕಡೆಯಲಿ ಸಂದ ಜನ್ಮಗ-

ಳಿಂದ ಧ್ಯಾನಾನಂದಪೂರಿತ ಬಂದವರಿಗವರೆಂದ ವರಗಳ 

ಬೃಂದ ಸಲಿಪ ಯತೀಂದ್ರ ತೋರಿಸೋ ತಂದೆಶ್ರೀವೆಂಕಟೇಶವಿಠಲನ 5

ಧನ್ವಂತ್ರಿಯೆನಿಸಿದ ಗ್ರಂಥ=ಅಮೃತ ಸದೃಶವಾದ `ಸುಧಾ’ ಗ್ರಂಥ; 

ಸ್ಮರಶರ ಭಂಗ=ಕಾಮದಾಸೆ ಬಿಡುವುದು; 

ಮಂತ್ರ ಸುವ್ಯಕ್ತವೇಶ್ಮ=ಮಂತ್ರಗಳ ಮಹಿಮೆಯನ್ನು 

ವ್ಯಕ್ತಪಡಿಸುವ ಮನೆ-ಮಂತ್ರಾಲಯ; 

ಅತಿಸಿಕ್ತಮಹಿಮ=ಅನುರಾಗದಿಂದ ಕೂಡಿದ ಮಹಿಮೆಯುಳ್ಳ; 

ಭಕ್ತಿ ಮುದ್ರಾಯುಕ್ತ=ಭಕ್ತಿಯೆಂಬ ಮುದ್ರೆಯನ್ನು ಹೊಂದಿರುವ; 

ಮಹಾಮರಧೇನು=ಸುರಧೇನು-ಕಾಮಧೇನು ; 

ಮರಾಳ=ಹಂಸ; ಸುತ್ರಾಮ ವಿಭವ ಸ್ತೋಮಸಮ=ಇಂದ್ರನ ವೈಭವ;

***