..
kruti: tandevaradagopala vittala (ಪ್ರಹ್ಲಾದಗೌಡರು)
ಶ್ರೀ ಮಧ್ವಾಚಾರ್ಯರು
ಸ್ಮರಿಸು ಸಂತತ ಗುರುಗಳಾ ಬಿಡದೆ ಅನುದಿನಾ ಪ
ವಾತ ಭೀಮನ ಒಡೆಯ ವೇದವ್ಯಾಸಯುತ ಸಾರಂಗಧರನಆ ಪ್ರೇಮದಿಂದಲಿ ಭಜಿಪೆನಡಿಗಳ ಬಿಡದೆ ಅ.ಪ.
ಮಂದ್ರಜಾಸನ ಸುತನ ವಚನ ಕೊಂಡು ಧರೆಯೊಳು ಬಂದು ಭಜಿಸುತ ಪೊಂದಿಪವರ ವೃಂದ ಹರಿಸಿ ಸುಗುಣ ಸುವೃಂದಗಳಿಗೆ ಬಂಧುಪರ ಗೋವಿಂದನೆಂಬುದ ಬೋಧಿಸಿದನ 1
ಮಂಗಳಾಂಗನ ಕೊಂಡು ತುಂಗಕುಲ ತೀರ್ಥರ ಶರದೀ ಬಂದೂ ಭೂಮಿಯೊಳು ಅನಂಗಪಿತನ ಒಲಿಸಿರಂಗರಾಜನ ದೂತನಿಂದಾ ವಿದ್ಯವಾ ಕೊಂಡು ಬಂದು ಪರಮಾದರದಿ ವ್ಯಾಸತ್ರಯಯುತ ಸುಧೆಯನಗರದನಂಘ್ರಿಯಾ 2
ರಘುಕುಲಾ ಜಲಧೀಗೆ ಜಲಜವೈರಿಯಂತೊಪ್ಪುವಾಮಾರನಯ್ಯ ಶಿರಿ ಪರಶು ಪಾಣೀ ಯಾತ ಜಡೆಧಾರ ತುರೀಯನಾಶ್ರಯಿಸೀ ಬಾಣರೂಪವಾ ಬಿಡದೆಬಾಣವಾ ಗುರಿ ಮಾಡಿಬಾಣವರದನ ಸರಿಯೆಂದೆನಿಸಿ ಬಾಣ ಭೇದವನೆ ಬೋಧಿಸಿಬೋಧತೀರ್ಥರ ಮತಾಧಿಪನ ತಂದೆವರದಗೋಪಾಲವಿಠಲನಭಜಕಾ 3
***