Showing posts with label ಜೋ ಜೋ ಶ್ರೀಗುರು ಪ್ರಹ್ಲಾದರಾಜ karpara narahari JOJO SRI GURU PRAHLADARAJA. Show all posts
Showing posts with label ಜೋ ಜೋ ಶ್ರೀಗುರು ಪ್ರಹ್ಲಾದರಾಜ karpara narahari JOJO SRI GURU PRAHLADARAJA. Show all posts

Monday, 2 August 2021

ಜೋ ಜೋ ಶ್ರೀಗುರು ಪ್ರಹ್ಲಾದರಾಜ ankita karpara narahari JOJO SRI GURU PRAHLADARAJA

ರಾಗ : ನೀಲಾoಬರಿ   ತಿಶ್ರನಡೆ Vidwan. Sumukha Maudgalya

ಶ್ರೀ *ಕಾರ್ಪರ ನರಹರಿದಾಸರ ಕೃತಿ* 

 *ಪ್ರಹ್ಲಾದರಾಜರ, ವ್ಯಾಸರಾಜರ, ರಾಯರ, ಜೋಗುಳ ಪದ* 

ರಾಗ : ನೀಲಾoಬರಿ   ತಿಶ್ರನಡೆ 


ಜೋ ಜೋ ಶ್ರೀಗುರು ಪ್ರಹ್ಲಾದರಾಜ 

ಜೋಜೋ ಭಜಕರ ಕಲ್ಪ

ಮಹೀಜ IIಪII

ಸ್ತಂಭ ದರ್ಶಿತ ನರಮೃಗರಾಜ ಜೋಜೋ

ಭಂಗಾರಕಶಿಪುತನುಜ ಜೋ  ಜೋ IIಅ. ಪII


ಚಂದ್ರಿಕಾದಿ ಸದ್ಗ್ರಂಥತ್ರಯದಿಂದಾ

ನಂದಿತ ಭೂಮಿ ವೃಂದಾರಕ ವೃಂದಾ

ವಂದಿಪರಘಕುಲ ಪನ್ನಗವೀಂದ್ರ

ವಂದಿಸುವೆನು ಗುರು ವ್ಯಾಸಯತೀಂದ್ರ II1II



ಜೋ ಜೋ ಮಧ್ವಮತಾಂಬುಧಿ ಚಂದ್ರ

ಜೋ ಜೋ ಮಾಯಿ ಮತ್ತೇಭ ಮೃಗೇಂದ್ರ

ಜೋ ಜೋ ಜ್ಞಾನಾದಿ ಸದ್ಗುಣ ಸಾಂದ್ರ

ರಾಜಾಧಿರಾಜ ಶ್ರೀ ಗುರು ರಾಘವೇಂದ್ರ II2II


ಮಂತ್ರಮಂದಿರದಿ ನಿಂತು ಶೇವಕರ

ಚಿಂತಿಪ ಫಲಗಳ ಕೊಡುವ ಉದಾರ

ಎಂತು ತುತಿಸಲಿ ತನ್ಮಹಿಮೆ ಅಪಾರ ಮುಕ್ತಿ

ಪಂಥವ ತೋರಿಸಿ ಮಾಡೊ ಉದ್ಧಾರ II3II


ಗುರುರಾಘವೇಂದ್ರ ನಿಮ್ಮಯ ಶುಭ ಚರಿಯ

ನಿರುತಸ್ಮರಿಪರಘ ತಿಮಿರಕೆ ಸೂರ್ಯ

ಧರಿಸುರ ಶೇವಿತ ಪರಿಮಳಾಚಾರ್ಯ

ಶಿರಿ ಕಾರ್ಪರನರಹರಿ ಗತಿ ಪ್ರಿಯ II4II

***



ಜೋ ಜೋ ಶ್ರೀಗುರು ಪ್ರಹ್ಲಾದರಾಜ

ಜೋಜೋ ಭಜಕರ ಕಲ್ಪಮ ಹೀಜ

ಸ್ತಂಭ ದರ್ಶಿತ ನರಮೃಗರಾಜ ಜೋಜೋ

ಭಂಗಾರಕÀಶಿಪುತನುಜ ಜೋ ಜೋ 1


ಚಂದ್ರಿಕಾದಿ ಸದ್ಗ್ರಂಥತ್ರಯದಿಂದಾ

ನಂದಿತ ಭೂಮಿ ವೃಂದಾರಕ ವೃಂದಾ

ವಂದಿಪರಘಕುಲ ಪನ್ನಗವೀಂದ್ರ

ವಂದಿಸುವೆನು ಗುರು ವ್ಯಾಸಯತೀಂದ್ರ2


ಜೋ ಜೋ ಮಧ್ವಮತಾಂಬುಧಿ ಚಂದ್ರ

ಜೋ ಜೋ ಮಾಯಿ ಮತ್ತೇಭ ಮೃಗೇಂದ್ರ

ಜೋ ಜೋ e್ಞÁನಾದಿ ಸದ್ಗುಣ ಸಾಂದ್ರ

ರಾಜಾಧಿರಾಜ ಶ್ರೀ ಗುರು ರಾಘವೇಂದ್ರ 3


ಮಂತ್ರಮಂದಿರದಿ ನಿಂತು ಶೇವಕರ

ಚಿಂತಿಪ ಫಲಗಳ ಕೊಡುವ ಉದಾರ

ಎಂತು ತುತಿಸಲಿ ತನ್ಮಹಿಮೆ ಅಪಾರ ಮುಕ್ತಿ

ಪಂಥವ ತೋರಿಸಿ ಮಾಡೊ ಉದ್ಧಾರ 4


ಗುರುರಾಘವೇಂದ್ರ ನಿಮ್ಮಯ ಶುಭ ಚರಿಯ

ನಿರುತಸ್ಮರಿಪರಘ ತಿಮಿರಕೆ ಸೂರ್ಯ

ಧರಿಸುರ ಶೇವಿತ ಪರಿಮಳಾಚಾರ್ಯ

ಶಿರಿ ಕಾರ್ಪರನರಹರಿ ಗತಿ ಪ್ರಿಯ5

****