Showing posts with label ಕಾಮ ಕಂಗೆಡಿಸುತಲಿದೆ ಕ್ರೋಧ ಬಾಧಿಸುತಲಿದೆ achalananda vittala ankita suladi ಸುಳಾದಿ. Show all posts
Showing posts with label ಕಾಮ ಕಂಗೆಡಿಸುತಲಿದೆ ಕ್ರೋಧ ಬಾಧಿಸುತಲಿದೆ achalananda vittala ankita suladi ಸುಳಾದಿ. Show all posts

Monday, 2 August 2021

ಕಾಮ ಕಂಗೆಡಿಸುತಲಿದೆ ಕ್ರೋಧ ಬಾಧಿಸುತಲಿದೆ achalananda vittala ankita suladi ಸುಳಾದಿ

 ಧ್ರುವತಾಳ

ಕಾಮ ಕಂಗೆಡಿಸುತಲಿದೆ

ಕ್ರೋಧ ಬಾಧಿಸುತಲಿದೆ

ಲೋಭ ಲೋಭನರಿಯದಿದೆ

ಮೋಹ ಮುದ ಹೀರುತಿದೆ

ಮದ ಮುಂದುಗೆಡಿಸುತಿದೆ

ಮತ್ಸರ ತುಚ್ಛಮಾಡುತಿದೆ

ದೇವ ಏನು ಮಾಡಲಿ ಸ್ವಾಮಿ

ದೇವ ನಾನೊಂದು ಬೇಡಿದರೆ

ನೀನೊಂದು ನೇಮಿಸಿ ನೋಡಿ ನಗುವೆ ಸ್ವಾಮಿ

ಬಡವನ್ನ ಬಿಡಲಾಗದು

ದೂರವೇನೋ ಸ್ವಾಮಿ ಒಡೆಯ

ಬಿಡಿಸಯ್ಯ ಹಗೆಗಳ ಕಾಟವ

ಕೊಡು ನಿನ್ನ ಭಕುತಿಸುಖವನು

ನಿನ್ನ ಭಕುತಜನರೊಡನಾಡಿಸು

ಅಚಲಾನಂದವಿಠಲ ಕರುಣಿ 1

ರೂಪಕತಾಳ

ಹೆಜ್ಜೆ ಹೆಜ್ಜೆಗೆ ಗೋವಿಂದ ಎನ್ನದೆ

ಲಜ್ಜೆಗೆಟ್ಟ ಪಾಪಿಗೆ ನಿತ್ಯನರಕ

ಲಜ್ಜೆಯನಳಿದು ಮಹಾತ್ಮರು ಹರಿ ಪಾ-

ದಾಬ್ಜದ ಮಕರಂದವನು ಭುಂಜಿಪರು

ಸಜ್ಜನಪ್ರಿಯ ಅಚಲಾನಂದವಿಠಲ

ಅರ್ಜುನಗೊಲಿದಂತೆ ಒಲಿವನು ಕಾಣಿರೊ 2

*

ಆರಾರ ಮನೆಗಳಿಗೆ ಹಾರೈಸಿ ಹೋದರೆ

ಆರೆನ್ನ ನುಡಿಸರು ಇತ್ತ ಬಾ ಎನ್ನರೊ

ಇಂತು ಸಾರುವೆ ಹರಿಯೆ ಸುತ್ತ ಮುತ್ತಿದ

ಸಂಸಾರಕ್ಕೆ ಎಲ್ಲರು ಇಂತು

ಸಾರುವೆ ಹರಿಯೆ ಕತ್ತಲೆಗವಿದ

ಕಣ್ಣು ಕಾಣದ ಮುಗುಧಂಗೆ

ಎತ್ತಲೈದಾನೋ ನಮ್ಮ ಅಚಲಾನಂದವಿಠಲ 3

ಜತೆ

ಎನ್ನವಗುಣಗಳಯೆಣಿಸಲಾಗದು ದೇವ ಈ ವ್ಯಾಳೆ ಕಾಯೊ

ಎನ್ನಮ್ಯಾಲೆ ಕೃಪೆ ಮಾಡೊ ಅಚಲಾನಂದವಿಠಲ **



* ತಾಳ ಹೇಳಿಲ್ಲ

** ಇದೊಂದು ಅಪೂರ್ಣ ಸುಳಾದಿ

***