ಪಾಡಿ ರಾಗ ಆದಿತಾಳ
ಮಾಯ ಮತ ಒಳಿತಲ್ಲ ನಿನಗೆ
ನಾಯಿ ಜನ್ಮ ಬಾರದೆ ಬಿಡದಲ್ಲ ||ಪ||
ಜಗಕೆ ಕಾರಣ ದೇವ ತಾನಿರಲು
ಬೊಗಳಿಕೊಂಬೆ ಭೇದವಿಲ್ಲೆಂದು
ತೆಗೆವನು ಯಮ ಬೆನ್ನ ಚರ್ಮ ಇದು
ನಗೆಯಲ್ಲ ಕೇಳೊ ತಿಳಿಯೊ ದುಷ್ಕರ್ಮ ||೧||
ಭೇದವಿಲ್ಲೆಂದು ತಿಳಿದು ನೀ
ಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊ
ಸಾಧಿಸಿ ನೋಡಲು ನಿನಗೆ ಇಷ್ಟು
ಬದುಕುಂಟಾದರು ಉಸುರಲಿನ್ಯಾಕೊ ||೨||
ಅಕ್ಕತಂಗಿಯರಿರಲು ನೀನು
ರೊಕ್ಕವಿಕ್ಕಿ ಮದುವೆ ಆಗುದ್ಯಾಕೊ
ಚಿಕ್ಕ ತಂಗಿ ತಾಯಿ ಮೊದಲು ನಿನ್ನ
ಲೆಕ್ಕದಲಿ ನೋಡಲು ಒಂದಲ್ಲವೇನೋ ||೩||
ಶಂಕರಮತಕೆ ನೀ ಹೊಂದಿ
ಪಂಕದೊಳು ಬೀಳಬೇಕಲ್ಲೊ
ಸಂಕಟಗೊಳಗಾದಿಯಲ್ಲ ನಿನ್ನ
ಬಿಂಕವ ಮುರಿವರು ಯಮನವರಲ್ಲೊ ||೪||
ಇನ್ನಾದರು ಭೇದಮತವನು ನೀನು
ಚೆನ್ನಾಗಿ ತಿಳಿಯೊ ರಂಗವಿಠಲನು
ತನ್ನ ದಾಸ್ಯವನು ಕೊಟ್ಟು
ಉನ್ನಂತ ಪದವೀವನು ನಿನಗೆ ||೫||
*******
ಮಾಯ ಮತ ಒಳಿತಲ್ಲ ನಿನಗೆ
ನಾಯಿ ಜನ್ಮ ಬಾರದೆ ಬಿಡದಲ್ಲ ||ಪ||
ಜಗಕೆ ಕಾರಣ ದೇವ ತಾನಿರಲು
ಬೊಗಳಿಕೊಂಬೆ ಭೇದವಿಲ್ಲೆಂದು
ತೆಗೆವನು ಯಮ ಬೆನ್ನ ಚರ್ಮ ಇದು
ನಗೆಯಲ್ಲ ಕೇಳೊ ತಿಳಿಯೊ ದುಷ್ಕರ್ಮ ||೧||
ಭೇದವಿಲ್ಲೆಂದು ತಿಳಿದು ನೀ
ಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊ
ಸಾಧಿಸಿ ನೋಡಲು ನಿನಗೆ ಇಷ್ಟು
ಬದುಕುಂಟಾದರು ಉಸುರಲಿನ್ಯಾಕೊ ||೨||
ಅಕ್ಕತಂಗಿಯರಿರಲು ನೀನು
ರೊಕ್ಕವಿಕ್ಕಿ ಮದುವೆ ಆಗುದ್ಯಾಕೊ
ಚಿಕ್ಕ ತಂಗಿ ತಾಯಿ ಮೊದಲು ನಿನ್ನ
ಲೆಕ್ಕದಲಿ ನೋಡಲು ಒಂದಲ್ಲವೇನೋ ||೩||
ಶಂಕರಮತಕೆ ನೀ ಹೊಂದಿ
ಪಂಕದೊಳು ಬೀಳಬೇಕಲ್ಲೊ
ಸಂಕಟಗೊಳಗಾದಿಯಲ್ಲ ನಿನ್ನ
ಬಿಂಕವ ಮುರಿವರು ಯಮನವರಲ್ಲೊ ||೪||
ಇನ್ನಾದರು ಭೇದಮತವನು ನೀನು
ಚೆನ್ನಾಗಿ ತಿಳಿಯೊ ರಂಗವಿಠಲನು
ತನ್ನ ದಾಸ್ಯವನು ಕೊಟ್ಟು
ಉನ್ನಂತ ಪದವೀವನು ನಿನಗೆ ||೫||
*******