Showing posts with label ನೋಡೊ ಮನ ಕೊಂಡಾಡೊ ಮರೆಯದಲೆ ಮನ ಚಿಂತ bheemesha krishna. Show all posts
Showing posts with label ನೋಡೊ ಮನ ಕೊಂಡಾಡೊ ಮರೆಯದಲೆ ಮನ ಚಿಂತ bheemesha krishna. Show all posts

Wednesday, 1 September 2021

ನೋಡೊ ಮನ ಕೊಂಡಾಡೊ ಮರೆಯದಲೆ ಮನ ಚಿಂತ ankita bheemesha krishna

 ..



ನೋಡೊ ಮನ ಕೊಂಡಾಡೊ ಮರೆಯದಲೆ

ಮನ ಚಿಂತÀ ಲ್ರೇವ ಲೇಶನ ?

ಪಾಡುತಿರೆ ಕೃಷ್ಣಾತೀರದ್ವಾಸನ

ಮಾಡೊ ಮಹಾತ್ಮರೆಂದೆನಿಸೊ ದಾಸರ

ಜೋಡು ಪಾದಂಗಳಿಗೆ ವಂದನೆ ಪ


ಅಂಜನೆಯಲ್ಲುದಿಸಿ ಕೌಸಲ್ಯಾ-

ಕಂದನಂಘ್ರಿಕಮಲ ಸೇವೆಗೆ

ಅಂಗದ ಮೊದಲಾದ ಕಪಿಗಳ

ಸಂಗ ಬಿಟ್ವಾರಿಧಿಯನ್ಹಾರುತ

ಭಂಗ ಬಡಿಸುತ ರಾವಣನ ಪುರ

ಮಂಗಳಾರತಿ ಮಾಡಿ ಜಾನಕಿ

ಗುಂಗುರವನಿಟ್ಟೆರಗಿ ರಾಮರಿ

ಗಂಗನೆಯ ವಾರ್ತೆಗಳನರುಹಿದೆ1


ಕುಂತಿಸುತನಾಗ್ಯುದಿಸಿ ಬ್ಯಾಗನೆ

ಪಂಥಮಾಡುತ ಕೌರವರ ಕುಲ-

ಕಂತಕನು ನಾನೆಂದು ರಣದೊಳು

ನಿಂತು ಗದೆ ಹಾಕವರ ಸವರುತ

ಅಂತರಂಗದಿ ಹರಿಯ ದಿವ್ಯಾ-

ನಂತ ಗುಣಗಳ ತಿಳಿದು ದ್ರೌಪದೀ-

ಕಾಂತನೆನಿಸಿ ತಾ ಕರುಣನಿಧಿಗೇ-

ಕಾಂತ ಭಕ್ತನೆಂದಿನಿಸಿದಾತನು 2


ಮಧ್ಯಗೇಹಭಟ್ಟರಲ್ಲಿ ಮಗನಾ-

ಗಿದ್ದ ಸುಜನರಭೀಷ್ಟದಾಯಕ

ಗೆದ್ದು ಮಾಯಾವಾದಿಗಳನೆ ಪ್ರ

ಸಿದ್ಧಿನೆನಿಸಿದೆ ಸರ್ವಲೋಕದಿ

ಶುದ್ಧ ಜÁ್ಞನಾನಂದತೀರ್ಥರು

ಮಧ್ವಮತದ ಬಿರುದನೆತ್ತಿದ

ಪದ್ಮಪತಿ ಭೀಮೇಶಕೃಷ್ಣಗೆ

ಪರಮಭಕ್ತನೆಂದೆನಿಸಿದಾತನು 3

***