Showing posts with label ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ prasanna. Show all posts
Showing posts with label ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ prasanna. Show all posts

Saturday, 1 May 2021

ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ ankita prasanna

 

ಶ್ರೀ ಪ್ರಸನ್ನ ತೀರ್ಥರ ಕೃತಿ


ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ |

ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ | ಅ ಪ |

ಕೊಳಲನೂದುವಾ ಕೃಷ್ಣ ಕೊಳಲನೂದುವ |



ಜಾರನೆಂದು ಸಣ್ಣಮಾತನಾಡಿದ್ದಾಯಿತು| ಚೋರನೆಂದು ಬಹಳ ದೂರು

ಮಾಡಿದ್ದಾಯಿತು | 

ಮೂರು ನಿಮಿಷ ಅವನ ಮರೆಯಲಾಗದಾಯಿತು |

ಬೀರುತಿರುವ ಮೋಹಜಾಲ ಸಡಲದಾಯಿತು | ೧ | 

| ಬಾರೆ ಸಖಿ |


ಯಾವನೀತನೆಂದು ಚಿಂತೆ ಮಾಡಿದ್ದಾಯಿತು | ಗೋವಳನಿವನಲ್ಲವೆಂದು ನಿರ್ಧರಾಯಿತು |

ಯಾವನಾದರೇನು ಇವನ ಕ್ಷಣವು ಕಾಣದೆ | 

ಜೀವನ ಕಳೆಯುವುದೆ ದೊಡ್ಡ ಭಾರವಾಯಿತು | ೨ |

| ಬಾರೆ ಸಖಿ |


ಮಂದಹಾಸದಿಂದ ಸಕಲ ಜಗವ ಬೆಳಗುವ | 

ಚಂದ್ರನು ತಾನಿವನ ನೋಡಿ

ಬಹಳ ನಾಚುವ | ಸಾಂದ್ರವಾಯಿತಂತರಿಕ್ಷ ಮಧುರ ನಾದದಿ| 

ಮಂದ ಮಾರುತ ತಾ ತಲೆಯನಾಡುವ | ೩ |

| ಬಾರೆ ಸಖಿ |


ನಾದದ ಸುಧೆ ಸಾಗರದಲಿ ತೇಲುವಂತಿದೆ | ಮಾಧವ ತಾ ಸುಧೆಯ ರಸವನೆರಚುವಂತಿದೆ |

ಬಾಧಿಸುತಿಹ ಭವದ ತಾಪವಡಗಿದಂತಿದೆ|  ಮಾದರಿಫಲ ರಾಸಕ್ರೀಡೆ ತೋರುವಂತಿದೆ | ೪ |

|  ಬಾರೆ ಸಖಿ |


ಸಕಲ ಲೋಕನಾಥನೀತನೆಂದು ತಿಳಿಯಿತು |  ಸಕಲವನರ್ಪಿಸುವುದೊಂದೆ

ಮಾರ್ಗ ಉಳಿಯಿತು | 

ಲಕುಮಿ ಮುರುಳಿ ರೂಪದಲ್ಲಿ

ಇಹುದು ಹೊಳೆಯಿತು | 

ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು | ೫ |

‌ | ಬಾರೆ ಸಖಿ |