Showing posts with label ಇನ್ನು ದಯೆ ಬಾರದೆ ದಾಸನ ಮೇಲೆ ಇನ್ನೂ purandara vittala INNU DAYABAARDE DAASANA MELE INNOO. Show all posts
Showing posts with label ಇನ್ನು ದಯೆ ಬಾರದೆ ದಾಸನ ಮೇಲೆ ಇನ್ನೂ purandara vittala INNU DAYABAARDE DAASANA MELE INNOO. Show all posts

Saturday, 18 December 2021

ಇನ್ನು ದಯೆ ಬಾರದೆ ದಾಸನ ಮೇಲೆ ಇನ್ನೂ purandara vittala INNU DAYABAARDE DAASANA MELE INNOO













ಇನ್ನೂ ದಯಬಾರದೇ ದಾಸನ ಮೇಲೆ
ಇನ್ನೂ ದಯಬಾರದೇ ||ಪ||

ಪನ್ನಗಶಯನನೆ ಪಾಲ್ಗಡಲೊಡೆಯನೆ ಕೃಷ್ಣ || ಅ.ಪ||

ನಾನಾದೇಶಗಳಲ್ಲಿ ನಾನಾ ಕಾಲಗಳಲ್ಲಿ
ನಾನಾ ಯೋನಿಗಳಲ್ಲಿ ಪುಟ್ಟಿ
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೇ ಗತಿಯೆಂದು ನಂಬಿದ ದಾಸನ ಮೇಲೆ ||

ಕಾಮಾದಿ ಷಡ್ವರ್ಗ ಗಾಡಾಂಧಕಾರದಿ
ಪಾಮರನಾಗಿಹ ಪಾತಕಿಯು
ಮಾಮನೋಹರನೆ ಚಿತ್ತಜಜನಕನೆ
ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ ||

ಮಾನಸ ವಾಚಾ ಕಾಯದಿ ಮಾಳ್ಪ ಕರ್ಮವು
ದಾನವಾಂತಕ ನಿನ್ನಧೀನವಲ್ತೆ
ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ
ಶ್ರೀನಾಥ ಪುರಂದರವಿಠಲ ದಾಸನ ಮೇಲೆ ||
****

ರಾಗ ಕಲ್ಯಾಣಿ ಅಟತಾಳ (raga, taala may differ in audio)
ರಾಗ :  ಕಲ್ಯಾಣಿ  ತಾಳ : ಮಿಶ್ರಛಾಪು 
kalyani / kalyanavasanta -Ata

pallavi

innU dayabArade dAsana mEle innU dayabArade

anupallavi

pannaga shayana pAlkaDaloDeyana krSNa

caraNam 1

nAnA dEshagaLalli nAnA kAlagaLalli nAnA yOnigaLalli nalidu puTTi
nAnu nannaduyemba narakadoLagebiddu nInE gatiyendu nambida dAsana mEle

caraNam 2

kAmAdi SaDvarga gAdhAndhakAradi pAmaranAgiha pAtakiyu
mA manOharane cittaja janakane nAmave gatiyendu nambida dAsana mEle

caraNam 3

mAnasa vAcA kAyadi mALpa karmavu dAnavAntaka ninnAdhInavalle
Enu mADidarEnu prANa ninnadu svAmi srInAtha purandara viTTala dAsana mEle
***

ಇನ್ನೂ ದಯಬಾರದೆ ದಾಸನ ಮೇಲೆ

ಪನ್ನಗ ಶಯನ ಶ್ರೀ ಪರಮಪುರುಷ ಹರಿಯೇ

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ

ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ

ನಾನು ನನ್ನದು ಎಂಬ ನರಕದೊಳಗೆ ಬಿದ್ದು

ನೀನೇ ಗತಿಯೆಂದು ನಂಬಿದ ದಾಸನ ಮೇಲೆ || ೧ ||

ಕಾಮಾದಿ ಷಡ್ವರ್ಗ ಗಾಢಾಂಧಕಾರದಿ

ಪಾಮರನಾಗಿದ್ದ ಪಾತಕನು

ಶ್ರೀ ಮನೋಹರನೆ ಚಿತ್ತಜ ಜನಕನೆ

ನಾಮ ಮುದ್ರಿಕೆಯಿಂದ ನಂಬಿದ ದಾಸನ ಮೇಲೆ || ೨ ||

ಮನೋವಾ ಕಾಯದಿಂದ ಮಾಡುವ ಕರ್ಮವು

ದಾನವಾಂತಕ ನಿನ್ನ ಅಧೀನವಲ್ಲವೆ

ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ

ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ || ೩ ||
***


innU dayabArade dAsana mEle
pannaga Sayana SrI paramapuruSha hariyE

nAnA dESagaLalli nAnA kAlagaLalli
nAnA yOnigaLalli nalidu puTTi
nAnu nannadu eMba narakadoLage biddu
nInE gatiyeMdu naMbida dAsana mEle || 1 ||

kAmAdi ShaDvarga gADhAMdhakAradi
pAmaranAgidda pAtakanu
SrI manOharane cittaja janakane
nAma mudrikeyiMda naMbida dAsana mEle || 2 ||

manOvA kAyadiMda mADuva karmavu
dAnavAMtaka ninna adhInavallave
Enu mADidarEnu prANa ninnadu svAmi
SrInAtha puraMdara viThalana dAsana mEle || 3 ||
***


Innu daye barade dasana mele
Pannangasayana palgadalodeyane ranga ||pa||

Nana desagalalli nana kalagalalli
Nana yonigalalli alidu putti
Nanu nannadu emba narakadolage biddu
Nine gatiyendu nambida dasana mele ||1||


Kamadi shadvarga gadhamdhakaradi
Pamaranagidda patakanu
Srimanoharane cittaja janakane
Namamudrikeyimda nambida dasana mele ||2||

Manasa vaca kayadi malpa karmavu
Danavantaka ninnadhinavallave
Enu madidarenu prana ninnadu deva
Srinatha purandaravithala dasana mele ||3||
***


P: innU dayabArade dAsana mEle innU dayabArade

A: pannaga shayana siri parama puruSa hariye

C1: nAnA dEshagaLalli nAnA kAlagaLalli [bandugalalli] nAnA yOnigaLalli nalidu huTTi
nAnu nannaduyemba narakadoLage biddu nInE gatiyendu nambida dAsana mEle

2: kAmAdi SaDvarga gAdhAndhakAradi pAmaranAgiha pAtakiyu
mA manOharane cittaja janakane nAmave gatiyendu nambida dAsana mEle

3: mano vAcA kAyadinda mAduva karmagaLella dAnavAntaka ninage dAnabittE
Enu mADidarEnu prANa ninnadu svAmi srInAtha purandara viTTalana dAsana mEle
***

Meaning: Don’t you bless your dasa(servant) even now(innu). Not even now!

A: O the one who rests on a snake(pannaga), and parama puruSa hari

C1: (Aren’t you yet blessing) your dasa who interacted (nalidu putti) in various(aAnA) regions(dEsha), and born from various wombs(yoni), for much time (kAla), and was holed(biddu) in the hell (naraka) of ‘I’ and ‘mine’ (nAnu – nannadu), and who has at last come to believe(nambida) that you are the only ultimate goal (aren’t you blessing him yet?).

C3: O destroyer of demons(dAnavAntaka), I hereby submit(dAna bitte), all my deeds(karmagalella) that are done with my mind and body(mano – kAya), to you(ninage). Whatever I do(enu mAdidarenu) my prAna(life) is in you. In spite of which, srinatha purandaravithala, why no mercy on your dAsa?
***

ಇನ್ನೂ ದಯೆ ಬಾರದೆ ದಾಸನ ಮೇಲೆ 
ಪನ್ನಂಗಶಯನ ಪಾಲ್ಗಡಲೊಡೆಯನೆ ರಂಗ                     ।।ಪ।।

ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ 
ನಾನಾ ಯೋನಿಗಳಲ್ಲಿ ಅಳಿದು ಪುಟ್ಟಿ 
ನಾನು ನನ್ನದು ಎಂಬ ನರಕದೊಳಗೆ ಬಿದ್ದು 
ನೀನೇ ಗತಿಯೆಂದು ನಂಬಿದ ದಾಸನ ಮೇಲೆ                    ।।೧।।

ಕಾಮಾದಿ ಷಡ್ವರ್ಗ ಗಾಢಾಂಧಕಾರದಿ 
ಪಾಮರನಾಗಿದ್ದ ಪಾತಕನು 
ಶ್ರೀಮನೋಹರನೆ ಚಿತ್ತಜ ಜನಕನೆ
ನಾಮಮುದ್ರಿಕೆಯಿಂದ ನಂಬಿದ ದಾಸನ ಮೇಲೆ                 ।।೨।।

ಮಾನಸ ವಾಚ ಕಾಯದಿ ಮಾಳ್ಪ ಕರ್ಮವು 
ದಾನವಾಂತಕ ನಿನ್ನಾಧೀನವಲ್ಲವೆ 
ಏನು ಮಾಡಿದರೇನು ಪ್ರಾಣ ನಿನ್ನದು ದೇವ 
ಶ್ರೀನಾಥ ಪುರಂದರವಿಠಲ ದಾಸನ ಮೇಲೆ                        ।।೩।।
*********