Showing posts with label ಸಾರಿರೊ ಡಂಗುರವ ನಮ್ಮ ಭಾರತಿರಮಣ ವಾಯುವೆ ಜಗದ್ಗುರುವೆಂದು shree krishna. Show all posts
Showing posts with label ಸಾರಿರೊ ಡಂಗುರವ ನಮ್ಮ ಭಾರತಿರಮಣ ವಾಯುವೆ ಜಗದ್ಗುರುವೆಂದು shree krishna. Show all posts

Wednesday, 1 September 2021

ಸಾರಿರೊ ಡಂಗುರವ ನಮ್ಮ ಭಾರತಿರಮಣ ವಾಯುವೆ ಜಗದ್ಗುರುವೆಂದು ankita shree krishna

 ..

ಸಾರಿರೊ ಡಂಗುರವ ನಮ್ಮ ಪ


ಭಾರತಿರಮಣ ವಾಯುವೆ ಜಗದ್ಗುರುವೆಂದು ಅ.ಪ


ಭೋರಿಡುತಲಿಪ್ಪ ಸಮುದ್ರವ ಲಂಘಿಸಿಧಾರುಣಿಸುತೆಯ ದುಃಖವ ಕಳೆದುಚೋರರಾವಣ ವನವನಲಗಾಹುತಿಯಿತ್ತುಶ್ರೀರಾಮಗೆರಗಿದಾತನೆ ಪ್ರಸಿದ್ಧನೆಂದು 1


ಕುಶಲದಿ ಕುಂತಿಗೆ ಮಗನಾಗಿ ಭೀಮನೆ-ನಿಸಿ ಆ ಕೌರವ ಕಪಟದಲಿ ಕೊಟ್ಟವಿಷದ ಕಜ್ಹಾಯವ ತಿಂದು ಜೀರ್ಣಿಸಿಕೊಂಡಅಸಮ ಬಲಾಢ್ಯ ಮೂರುತಿಯೆ ಬದ್ಧವೆಂದು 2


ಕಲಿಯುಗದÀಲಿ ಮಧ್ಯಗೇಹಾಭಿಧಾನದತುಳುವ ಬ್ರಾಹ್ಮಣನಲಿ ಅವತರಿಸಿಒಲಿದು ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂ-ದಲಿ ಆಶ್ರಮಗೊಂಡ ಪೂರ್ಣಪ್ರಜ್ಞನೆಂದು 3


ಖೂಳ ದೈತ್ಯನು ಕೊಲ್ಲಬೇಕೆಂದು ಕಪಟದಿಕಾಳಾಹಿ ವೇಷದಿಂ ಬಂದಿರಲು ಕಾಲ ಪ್ರಳಯದ ಸಿಡಿಲು ಬಂದೆರಗಿದಂತೆಕಾಲಿಂದ ತುಳಿದವನಸುವಗೊಂಡನು ಎಂದನು 4


ಬಳಿಕ ಇಪ್ಪತ್ತೊಂದು ದುರ್ಭಾಷ್ಯಂಗಳಹಳಿದು ವೇದಾಂತ ಶಾಸ್ತ್ರಂಗಳಲಿಉಳುಹಿ ವೈಷ್ಣವ ಮತವವನಿಯೊಳಗೆ ನಮ್ಮಸಲಹುವ ಮಧ್ವೇಶ ಕೃಷ್ಣ ಪ್ರಿಯನೆಂದು5

***