ಬಾಲನ ಕಂಡಿಹೆನೆ ಗೋಪಾಲನ ಕಂಡಿಹೆನೆ ಪ
ಬಾಲನ ಕಂಡಿಹೆ ಲೀಲೆಯ ಮಾಡುತ ಅಂಬೆ-ಗಾಲಿಕ್ಕುತ ಗೋಕುಲಾಲಯದೊಳಗಿಹಅ.ಪ.
ಮುರಳಿ ಮುಖದೊಳಿದ್ದು ಊದುತ ವೃಜದಿಸರಸಿ ಗೋಪಿವನಿತೆರ ಮೋಹಿಪ 1
ಕರದೊಳು ಕಂಕಣ ವಂಕಿ ಪೊನ್ನುಂಗುರಅಲಂಕೃತ ಪೂರ್ಣ ಅಕಳಂಕ ಇಂದು ವಕ್ತ್ರನ 2
ಕಾಶೀ ಪೀತಾಂಬರ ಭೂಷಿತ ಕಟಿ ಮಂದ-ಹಾಸ ಮಾಡುತಲಿದ್ದ ಇಂದಿರೇಶನ ಹೇ ಸಖಿ 3
****