..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ವಿಜಯದಾಸರು
ವಿಜಯದಾಸರೆ ನಿಮ್ಮ ಪಾದವನಜಗಳನ್ನು
ಭಜಿಸೆ ಭಾಗ್ಯವದೆಂದು ಸಾಧುಜನಮತವು ಪ
ವಸುಧೆ ವೈಕುಂಠಪತಿ ವಿಜಯ ವೆಂಕಟಕೃಷ್ಣ
ಬಿಸಜಭವಪಿತ ಬಿಂದು ಮಾಧವಗೆ ಪ್ರಿಯ
ವಾಸವಾಹ್ವಯ ದಾಸಶ್ರೇಷ್ಠರಿಗೆ ಪ್ರಿಯತಮರೆ
ದಾಸವರ ಸುರವರ್ಯ ವಿಜಯಾರ್ಯ ಶರಣು 1
ಮೃತ್ಯು ಅಪಮೃತ್ಯುಗಳ ತರಿದು ನಂಬಿದವರಿಗೆ
ಸತ್ಯಾರಮಣನೊಲುಮೆ ಒದಗಿಸಿದಿರಿ
ಮತ್ರ್ಯರಲಿ ನಾ ಮಂದ ನಿಮ್ಮ ನಂಬಿದೆ ಎನ್ನ
ಭೃತ್ಯನೆಂದೆನಿಸಿ ವಾತ್ಸಲ್ಯದಿ ಪಾಲಿಪುದು 2
ಎನ್ನ ಸರ್ವೇಂದ್ರಿಯವು ಹೀನವಿಷಯದಿ ರತವು
ಬಿನ್ನಹವ ಮಾಡಲ್ಕೆ ಬಗೆ ಏನು ಕಾಣೆ
ಘನ ಔದಾರ್ಯನಿಧಿ ನಿಮಗೆ ಶರಣೆಂಬುವುದು
ಒಂದನ್ನೆ ನಾ ಬಲ್ಲೆ ಶರಣು ಸುರಧೇನು 3
ಇಷ್ಟಧನ ಆಯುಷ್ಯ ಕೀರ್ತಿ ಉನ್ನತಜಯ
ದುಷ್ಟಭಯ ಬಂಧನಿಗ್ರಹವು ವೈರಾಗ್ಯ
ಉತ್ಕøಷ್ಟ ಹರಿಭಕ್ತಿ ಜ್ಞಾನವೀವುವು ನಿಮ್ಮ
ಶ್ರೇಷ್ಠಪದ ಕೀರ್ತನೆ ನಾಮ ಸಂಸ್ಮರಣೆ 4
ಅಜನ ಜನಕನು ಶ್ರೀ ಪ್ರಸನ್ನ ಶ್ರೀನಿವಾಸನು
ಅಜಿತ ಅಜನಂದಿನೀಪಿತನು ಗೋಪಾಲ
ಅಬ್ಜ ಶಂಖವ ಪಿಡಿದ ವರ ಅಭಯಹಸ್ತ ಶ್ರೀ
ವಿಜಯ ವಿಜಯಾಪತಿಯ ದಾಸರಿಗೆ ಶರಣು 5
***
ಶ್ರೀ ವಿಜಯದಾಸರು
ವಿಜಯದಾಸರೆ ನಿಮ್ಮ ಪಾದವನಜಗಳನ್ನುಭಜಿಸೆ ಭಾಗ್ಯವದೆಂದು ಸಾಧುಜನಮತವು ಪ
ವಸುಧೆವೈಕುಂಠಪತಿವಿಜಯವೆಂಕಟಕೃಷ್ಣಬಿಸಜಭವಪಿತ ಬಿಂದು ಮಾಧವಗೆ ಪ್ರಿಯವಾಸವಾಹ್ವಯ ದಾಸಶ್ರೇಷ್ಠರಿಗೆ ಪ್ರಿಯತಮರೆದಾಸವರ ಸುರವರ್ಯ ವಿಜಯಾರ್ಯ ಶರಣು 1
ಮೃತ್ಯು ಅಪಮೃತ್ಯುಗಳ ತರಿದು ನಂಬಿದವರಿಗೆಸತ್ಯಾರಮಣನೊಲುಮೆ ಒದಗಿಸಿದಿರಿಮತ್ರ್ಯರಲಿ ನಾಮಂದನಿಮ್ಮ ನಂಬಿದೆ ಎನ್ನಭೃತ್ಯನೆಂದೆನಿಸಿ ವಾತ್ಸಲ್ಯದಿ ಪಾಲಿಪುದು 2
ಎನ್ನ ಸರ್ವೇಂದ್ರಿಯವು ಹೀನವಿಷಯದಿ ರತವುಬಿನ್ನಹವ ಮಾಡಲ್ಕೆ ಬಗೆ ಏನು ಕಾಣೆಘನಔದಾರ್ಯನಿಧಿ ನಿಮಗೆ ಶರಣೆಂಬುವುದುಒಂದನ್ನೆ ನಾ ಬಲ್ಲೆ ಶರಣುಸುರಧೇನು3
ಇಷ್ಟಧನ ಆಯುಷ್ಯ ಕೀರ್ತಿ ಉನ್ನತಜಯದುಷ್ಟಭಯ ಬಂಧನಿಗ್ರಹವು ವೈರಾಗ್ಯಉತ್ಕøಷ್ಟ ಹರಿಭಕ್ತಿ ಜ್ಞಾನವೀವುವು ನಿಮ್ಮಶ್ರೇಷ್ಠಪದ ಕೀರ್ತನೆ ನಾಮ ಸಂಸ್ಮರಣೆ 4
ಅಜನ ಜನಕನು ಶ್ರೀ ಪ್ರಸನ್ನ ಶ್ರೀನಿವಾಸನುಅಜಿತ ಅಜನಂದಿನೀಪಿತನು ಗೋಪಾಲಅಬ್ಜಶಂಖವ ಪಿಡಿದವರಅಭಯಹಸ್ತ ಶ್ರೀವಿಜಯವಿಜಯಾಪತಿಯ ದಾಸರಿಗೆ ಶರಣು5
*******