Showing posts with label ಹುಚ್ಚು ಹಿಡಿಸಿದೆಯಾಮಾಧವ pranesha vittala. Show all posts
Showing posts with label ಹುಚ್ಚು ಹಿಡಿಸಿದೆಯಾಮಾಧವ pranesha vittala. Show all posts

Tuesday, 19 November 2019

ಹುಚ್ಚು ಹಿಡಿಸಿದೆಯಾಮಾಧವ ankita pranesha vittala

by ಪ್ರಾಣೇಶದಾಸರು
ಹುಚ್ಚು ಹಿಡಿಸಿದೆಯಾಮಾಧವ|ನಿಚ್ಚನಿನ್ನ ಪಾದಾಂಬುಜವ ಭಜಿಪರಿಗೆ ಪ

ಮತ್ತಗಜವೆಂಟು ಸೊಕ್ಕಿಲಿ ಕೊಲ್ವವು |ಕುತ್ತಿಗೆ ಮುರಿವರಾರು ಮಂದಿಯೂ ||ಎತ್ತ ಹೋಯಿತೋ ಬುದ್ಧಿ ಕುಳಿತುಕೊಂಡರೆ ಮೇಲೆ |ಹುತ್ತ ಬೆಳದರೆಚ್ಚರಿಕೆಯಿಲ್ಲದಂಥ 1

ದಾರಾಸುತರೆನ್ನದಾರೆಂದು ನೋ |ಡರಾಗಾರ ನಮ್ಮದೆಂದು ಪೋಷಿಸರು ||ಆರಣ್ಯದಲಿ ಮುಸುಕಿಕ್ಕಿ ಧ್ಯಾನಿಸುವರು |ಶಾರೀರದ ಪರವಿಯನ್ನು ಬಿಟ್ಟಹರು 2

ಬಿದ್ದು ಯದ್ದ ಕಾಳು ಆದುಕೊಂಡುಂಬರು |ಇದ್ದ ಬದುಕು ಜೋಕೆ ಮಾಡೊಲ್ಲರು ||ಪ್ರದ್ಯುಮ್ನ ಪ್ರಾಣೇಶ ವಿಠಲನೇ ಇಂಥ |ಬುದ್ಧಿಯ ಪ್ರೇರಿಸಿ ನೋಡಿ ಹಿಗ್ಗುವೆನೀ 3
******