Showing posts with label ಪಾಲಿಸು ಪರಮೇಶಾ ಪಾಪವಿನಾಶಾ govinda. Show all posts
Showing posts with label ಪಾಲಿಸು ಪರಮೇಶಾ ಪಾಪವಿನಾಶಾ govinda. Show all posts

Wednesday, 13 November 2019

ಪಾಲಿಸು ಪರಮೇಶಾ ಪಾಪವಿನಾಶಾ ankita govinda

by ಗೋವಿಂದದಾಸ
ಪಾಲಿಸು ಪರಮೇಶಾ ಪಾಪವಿನಾಶಾಪಾಲಿಸು ಪಾರ್ವತೀಶಾಫಾಲಲೋಚನಫಣಿಭೂಷಣ ನತಜನಪಾಲನೆ ಪಾಪವಿಹಾರಣ ಕಾರಣ ಪ

ನಿತ್ಯನಿರ್ಮಲ ಚಿತ್ತನೀಕ್ಷಿಸೋ ಎನ್ನನಿತ್ಯತೃಪ್ತನೆ ಖ್ಯಾತ ನಿತ್ಯನಂದನೆನೀಲಕಂಧರಶಶಿಧರನಿರ್ಮಲರಜತಾದ್ರಿ ನಿಲಯನೆ ವಿಲಯನೆ 1

ಅಂಬಾ ವರದೇವ ಜಯ ಜಯವಿಶ್ವಕು-ಟುಂಬಿಲ ಸದ್ಭಾವಲಂಬೋದರ ಗುಹಜನಕ ಸದಾಶಿವನಂಬಿದೆ ಸಲಹೊ ಪ್ರಸೀತ ಸತ್ಪಾತ್ರ 2

ಆಗಮಶ್ರುತಿಸಾರ ಭಕ್ತರಭವರೋಗಶೋಕವಿದೂರಯೋಗಿಗಳ ಹೃದಯ ಸಂಚಾರನೆ ಭವಬಂಧನೀಗಿಸು ಗೋವಿಂದ ದಾಸನ ಪೋಷನೆ 3
*******