..
kruti by radhabai
ಎಂಥಾ ಮಹಿಮರು ನೋಡಿ - ಶ್ರೀ ರಾಘವೇಂದ್ರರು
ಎಂಥಾ ಮಹಿಮರೋ ಪ
ಇಂಥಾ ಮಹಿಮರೆಂದು
ಹೇಳಲಳಾವಲ್ಲ
ಕೊನೆಗಾಣೆನಿವರ ಅದಭುತ ಮಹಿಮೆಯನ್ನು ಅ.ಪ.
ದೇಶ ದೇಶಗಳನೆಲ್ಲಾ ಸಂಚರೀಸುತಲೀ
ವರ ಮಂತ್ರಾಲಯದೊಳು ಬಂದು ನಿಂದಿಹರು 1
ಭಕ್ತಾದಿಗಳೆಲ್ಲಾ ಪರಿಪರಿಯಿಂದ
ನಿಮ್ಮ ಸ್ತುತಿಸಿ ಕೊಂಡಾಡುತಿಹರು 2
ಒಂದೇ ಮನದಿಂದ ಒಂದು ಪ್ರದಕ್ಷಿಣೆ ನಮಿಸಲು
ಭವಬಂಧಗಳ ಬಿಡಿಸಿ ಆನಂದದಿ ಸಹಲುವರು 3
ಆದಿವ್ಯಾಧಿಗಳಿಂದ ಬಾಧೆ ಪಡುವಜನ
ಮೊದಲು ನಿಮ್ಮ ಸೇವಿಸೆ ಪಾವನಗೊಳುವರು4
ಪೀಡೆ ಪಿಶಾಚಿಗಳಿಂದ ಪೀಡಿತರಾಗುತ
ನಿಮ್ಮಡಿಗೆರಗಲು ಕಡುದಯ ಮಾಡುವಿರಿ5
ಶ್ರೀರಾಘವೇಂದ್ರಾಯ ನಮಃ ಎಂಬ ದಿವ್ಯನಾಮವ ಪಠಿಸಲು
ಪ್ರಭುಗಳು ಪಾವನ ಮಾಡುವರು 6
ಧರೆಯೊಳು ನಿಮ್ಮ ಸರಿಯಾರಿಹರೊ ಪ್ರಭು
ಗುರುಸಾರ್ವಭೌಮರು | ಶ್ರೀ ರಾಘವೇಂದ್ರರು7
***