Showing posts with label ಸಲಹೊ ಶ್ರೀಹರಿಯೆ ಎನ್ನ ಮೊರೆಯ ಚಿತ್ತೈಸಿ kamalanabha vittala. Show all posts
Showing posts with label ಸಲಹೊ ಶ್ರೀಹರಿಯೆ ಎನ್ನ ಮೊರೆಯ ಚಿತ್ತೈಸಿ kamalanabha vittala. Show all posts

Thursday, 5 August 2021

ಸಲಹೊ ಶ್ರೀಹರಿಯೆ ಎನ್ನ ಮೊರೆಯ ಚಿತ್ತೈಸಿ ankita kamalanabha vittala

 ..

kruti by Nidaguruki Jeevubai


ಸಲಹೊ ಶ್ರೀಹರಿಯೆ ಎನ್ನ ಮೊರೆಯ ಚಿತ್ತೈಸಿ

ಉರಗಾದ್ರಿವಾಸ ಶ್ರೀಹರಿ ಕೇಶಿಧ್ವಂಸಿ ಪ


ಸಾರ ಶೃಂಗಾರ ಯದುವೀರ ಸಲಹೆನ್ನ

ಮಾರನ ಜನಕ ಮಧುವೈರಿ ಮೋಹನ್ನ 1


ಅಪ್ಪ ತಿಮ್ಮಪ್ಪ ಎನ್ನ ತಪ್ಪನೆಣಿಸದಲೆ

ಸರ್ಪಶಯನ ಸರ್ವ ಶ್ರೇಷ್ಠ ಸಲಹೆನ್ನ 2


ರಂಗಉತ್ತುಂಗ ಅಂತರಂಗದಿ ಒಲಿದು

ಮಂಗಳಕರ ಪಾಂಡುರಂಗ ಸಲಹೆನ್ನ 3


ಬಾರಿಬಾರಿಗೆ ನಿನ್ನ ಹಾರೈಸುತಿರುವೆ

ಸಾರಸಾಕ್ಷನೆ ಸಾರ್ವಭೌಮ ಸಲಹೆನ್ನ 4


ಕಮಲ ಸಂಭವನಯ್ಯ ವಿಮಲಸ್ವರೂಪ

ಕಮಲನಾಭ ವಿಠ್ಠಲ ಪೊರೆ ಎನ್ನದಾತ5

***