..
ಬೇಡವೋ ಬ್ರಾಹ್ಮಣ ದ್ರೋಹ ಬೇಡವೋ ಪ
ಮಾಡಬೇಡವೋ ನಿನಗೆ | ಕೇಡು ತಪ್ಪದು ಕೊನೆಗೆನಾಡೊಳಗಪಕೀರ್ತಿ | ಗೀಡಾಗಿ ನೀ ಕೆಡ ಅ.ಪ.
ಹೊತ್ತಿದ್ದ ಬಹು ಭಾರ ನೀನು - ಅಂಥಅತ್ಯಂತವಲ್ಲವಿದೇನು - ನಿನ್ನ ||ಚಿತ್ತ ದೃಢ ಮಾಡು ಉತ್ತಮ ವಿಪ್ರರವೃತ್ತಿಯ ಸೆಳದು ಉನ್ಮತ್ತನಾಗಿ ಕೆಡ 1
ಸೂಸುವ ನದಿಯೊಳು ಬಿದ್ದು - ಇನ್ನುಈಸಲಾರದೆ ಮುಳುಗೆದ್ದು - ಅಂಜಿ ||ಈಸು ಬುರುಡೆ ಬಿಟ್ಟು ಬೀಸೋ ಕಲ್ಲನೆ ಕಟ್ಟಿಈಸುವ ತೆರನಂತೆ ಭೂಸುರ ದ್ರವ್ಯವು 2
ನೃಗರಾಯನೆಂಬ ಭೂಪತಿಯು - ವಿಪ್ರ-ರಿಗೆ ಗೋದಾನವನಿತ್ತ ಬಗೆಯ ಕೇಳಿ ||ಅಗಲಿ ತಮ್ಮೊಳು ತಾವೆ ಜಗಳ ಪುಟ್ಟಿ ಆ ನೃ-ಪಗೆ ತೊಣ್ಣೆಯಾಗೆಂದ್ಹಗರಣವನೆ ಕೇಳು 3
ರಾವಣನೆಂಬುವ ದುಷ್ಟ - ಅವ-ದೇವತೆಗಳ ಸೆರೆಯಿಟ್ಟ ||ದೇವನರಸಿ ಸೀತಾದೇವಿಯ ನೆಪದಿಂದರಾವಣನ ಕೊಂದು ದೇವತೆಗಳ ಕಾಯ್ದನೊ 4
ಇನ್ನೆಷ್ಟು ಹೇಳಲೊ ಸಾಕ್ಷಿ - ಬ್ರಾಹ್ಮ -ರನ್ನವ ತೆಗೆದರೆ ಶಿಕ್ಷಿ ಮೋ-ಹನ್ನ ವಿಠ್ಠಲರಾಯ ತನ್ನಯ ಭಜಕರಬೆನ್ನ ಬಿಡದಲೆ ಕಾಯ್ವ ಇನ್ನಾದರು ಕೆಡ 5
***