Showing posts with label ಜ್ಞಾನಿಯಾಗಬೇಕು ಅಜ್ಞಾನ ನೀಗಬೇಕು prasannavenkata. Show all posts
Showing posts with label ಜ್ಞಾನಿಯಾಗಬೇಕು ಅಜ್ಞಾನ ನೀಗಬೇಕು prasannavenkata. Show all posts

Monday, 11 November 2019

ಜ್ಞಾನಿಯಾಗಬೇಕು ಅಜ್ಞಾನ ನೀಗಬೇಕು ankita prasannavenkata

by ಪ್ರಸನ್ನವೆಂಕಟದಾಸರು
ಜ್ಞಾನಿಯಾಗಬೇಕು ಅಜ್ಞಾನ ನೀಗಬೇಕು ತತ್ವಜ್ಞಾನದಿಂದಿರಬೇಕು ಮುಕ್ತಿ ತಾನೆ ಆವಾಗಕ್ಕು ಪ.

ಅಬ್ಜಾನನನ್ನ ಪಾದಾಬ್ಜ ನಂಬಿರಿನ್ನು ಕುಶಬ್ದಗುಂದಿರಣ್ಣಭವಾಬ್ಧಿದಾಟಿರಣ್ಣ1

ಮಾಡಿ ಸಾಧುಸಂಗ ಬಿಡಿ ಖಳರಹಂಗನೀವುನೋಡಿ ಅಂತರಂಗ ಕೈ ನೀಡುವನು ರಂಗ 2

ತ್ಯಾಗಭೋಗಸರ್ವ ಶ್ರೀಹರಿಗೆ ಒಪ್ಪಿಸಿರುವ ಆಯೋಗಿಯನ್ನು ಕರೆವ ಶ್ರೀ ನಾಗಶಯನಹೊರೆವ3

ತಿದ್ದಿನೋಡಿವರ್ಮಅಸಾಧ್ಯ ಶರ್ಮನರ್ಮ ಬೇಗೆದ್ದು ಬಿಡಿ ಅಧರ್ಮ ನಿನ್ನದು ಶುಭಕರ್ಮ 4

ದಾಸರ ಜೀವನ ಭಕ್ತಪೋಷಕ ಪಾವನ ಶ್ರೀಪ್ರಸನ್ನ ವೆಂಕಟ ಪ್ರಸನ್ನ ಅಭಿಲಾಷೆ ಸಂಜÕನೆ ಧನ್ಯ 5
*******