Showing posts with label ಜಯ ಮಂಗಳಂ ನಿತ್ಯ ಶುಭ ನಿತ್ಯಮಂಗಳಂ ಜಗದೇಕ kamalanabha vittala JAYA MANGALAM NITYA SHUBHA MANGALAM JAGADEKA. Show all posts
Showing posts with label ಜಯ ಮಂಗಳಂ ನಿತ್ಯ ಶುಭ ನಿತ್ಯಮಂಗಳಂ ಜಗದೇಕ kamalanabha vittala JAYA MANGALAM NITYA SHUBHA MANGALAM JAGADEKA. Show all posts

Thursday, 2 December 2021

ಜಯ ಮಂಗಳಂ ನಿತ್ಯ ಶುಭ ನಿತ್ಯಮಂಗಳಂ ಜಗದೇಕ ankita kamalanabha vittala JAYA MANGALAM NITYA SHUBHA MANGALAM JAGADEKA

 


 

ನಿತ್ಯ ಶುಭಮಂಗಳಂ ಪ 

ಜಗದೇಕ ವೀರನಿಗೆ ಜಗದುದರ ದೇವನಿಗೆ ಜಗವ ಬಾಯೊಳು ತೋರ್ದ ಮಹಮಹಿಮಗೆ ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ ಜಗವ ಸಂಹರಿಸುವಗೆ ಜಯ ಮಂಗಳಂ ಅ.ಪ

 ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು ಆಗ ಗಿರಿಗಿಳಿದು ಬಂದು ಹುತ್ತದೊಳಗಿರಲು ಪರಮೇಷ್ಠಿ ಅರಸಿಪಾಲ್ಗರಿಯೆ ಗೋಪಾಲಕನ ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ 1 

ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ ಪರಮಪದ್ಮಾವತಿಯ ಮನದಿ ಕಂಡು ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ ಕೊರವಂಜಿ ರೂಪದಿಂ ಕಣಿಯ ಹೇಳಿದಗೆ 2 

ಆಕಾಶರಾಜನಿಗೆ ಅಳಿಯನೆನಸಿಕೊಂಡು ಆಕೆ ಪದ್ಮಾವತಿಯ ಕೂಡಿದವ ಬೇಕಾದ ವರಗಳನು ಕೊಡುತ ಭಕ್ತರ ಪೊರೆವಶ್ರೀಕಾಂತ ಕಮಲನಾಭವಿಠ್ಠಲಗೆ 3

***

ನಿಡಗುರುಕಿ ಜೀವೂಬಾಯಿ