ವಿಜಯದಾಸ
ಪರಮಾತ್ಮನೆ ನೀ ಸರಿ ಎಂದು
ಕರಗದ ತಮದಲ್ಲಿ ಸೇರುವದೆ ಪ
ಜೀವ ಪರಮಾತ್ಮಗೆ ಭೇದವ
ಆವಾವ ಕಾಲಕ್ಕೆಯಿಲ್ಲವೆಂದು
ದೇವನ ಬಳಿಗೆ ನೀ ದೂರಾಗಿ
ಈ ವಸುಧೆಯೊಳು ಬದುಕುವರೆ 1
ಭೇದ ಜೀವಕೆ ಜೀವ ಎಂದಿ
ಗಾದರು ಇಲ್ಲವೆಂದು ನುಡಿದು
ಈ ದುರಾಚಾರದಲ್ಲಿ ನಡೆದು
ಮಾದಿಗನಂತೀಗ ಮಾರ್ಮಲಿದು2
ಜಡ ಪರಮಾತ್ಮ ಜಡ ಜಡಕೆ
ಜಡ ಜೀವಕೆ ಅಭೇದವೆಂದು
ಕಡುಗರ್ವದಿಂದಲಿ ಉಚ್ಚರಿಸಿ
ಮಡಿದು ನರಕಕ್ಕೆ ಉರುಳುವರೆ 3
ಅರಸಿನ ಬಳಿಗೆ ತೋಟಿಗ ಬಂದು
ಅರಸೆ ನೀನೆ ನಾನೆಂದಡೆ
ಉರವಣಿಸಿ ಕೊಲ್ಲಿಸಿ ಅವನ
ಶೆರಿಯ ಹಾಕದೆ ಮನ್ನಿಸುವನೆ 4
ದಾಸನ ದಾಸನು ಎಂದು
ಏಸು ಜನ್ಮಕೆ ಅಹುದೆಂದು
ದ್ವೇಷವು ತೊರೆದು ನೆನಿಸಿದರೆ
ಮೀಸಲಾಗಿಡುವ ವಿಜಯವಿಠ್ಠಲಾ 5
*********
ಪರಮಾತ್ಮನೆ ನೀ ಸರಿ ಎಂದು
ಕರಗದ ತಮದಲ್ಲಿ ಸೇರುವದೆ ಪ
ಜೀವ ಪರಮಾತ್ಮಗೆ ಭೇದವ
ಆವಾವ ಕಾಲಕ್ಕೆಯಿಲ್ಲವೆಂದು
ದೇವನ ಬಳಿಗೆ ನೀ ದೂರಾಗಿ
ಈ ವಸುಧೆಯೊಳು ಬದುಕುವರೆ 1
ಭೇದ ಜೀವಕೆ ಜೀವ ಎಂದಿ
ಗಾದರು ಇಲ್ಲವೆಂದು ನುಡಿದು
ಈ ದುರಾಚಾರದಲ್ಲಿ ನಡೆದು
ಮಾದಿಗನಂತೀಗ ಮಾರ್ಮಲಿದು2
ಜಡ ಪರಮಾತ್ಮ ಜಡ ಜಡಕೆ
ಜಡ ಜೀವಕೆ ಅಭೇದವೆಂದು
ಕಡುಗರ್ವದಿಂದಲಿ ಉಚ್ಚರಿಸಿ
ಮಡಿದು ನರಕಕ್ಕೆ ಉರುಳುವರೆ 3
ಅರಸಿನ ಬಳಿಗೆ ತೋಟಿಗ ಬಂದು
ಅರಸೆ ನೀನೆ ನಾನೆಂದಡೆ
ಉರವಣಿಸಿ ಕೊಲ್ಲಿಸಿ ಅವನ
ಶೆರಿಯ ಹಾಕದೆ ಮನ್ನಿಸುವನೆ 4
ದಾಸನ ದಾಸನು ಎಂದು
ಏಸು ಜನ್ಮಕೆ ಅಹುದೆಂದು
ದ್ವೇಷವು ತೊರೆದು ನೆನಿಸಿದರೆ
ಮೀಸಲಾಗಿಡುವ ವಿಜಯವಿಠ್ಠಲಾ 5
*********