..
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಪ
ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ 1
ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ 2
ಉರಿಯೊಳು ಜನಿಸಿದವನ ನಿಜ ತಂಗಿಯಸೆರಗ ಪಿಡಿದ ಖಳನಣ್ಣನ ತಂಗಿಯವರನ ತಲೆಯನು ಕತ್ತರಿಸಿದ ಧೀರನಗುರುವಿನೊಳುದಿಸಿದನಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನಕರೆದು ವರವನಿತ್ತು ಮನ್ನಿಸಿ ಸಲಹುವಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ 3
***