..
ವಿಜಯದಾಸರ | ದಿವ್ಯ
ವಿಜಯ ನೆನೆವರ ಪ
ವಿಜಯಸಾರಥಿಯ ಮನದಿ
ಭಜಿಪ ಸತ್ವರ ಅ.ಪ.
ಆದಿದೇವನ | ಒಲುಮೆ ಸಾಧಿಸಿದನ
ಯಾದವೇಶನ | ಕಂಡ ಮೋದ ಭರಿತನ 1
ಮನದಿ ಹರಿಯನು | ಸತತ ಕುಣಿಸಿ ನಲಿವನು
ಪ್ರಣಿತ ಪಾಲಯ | ಅಮೃತ ಖಣಿ ವಿಶಿಷ್ಟನು 2
ಭಕ್ತಿಯುಕ್ತಿಯ | ಮಹಾವಿರಕ್ತಿ ಉಕ್ಕುತ
ಭಕ್ತ ಜನರಿಗೆ ಬಿಂಬ ವ್ಯಕ್ತಿ ಮಾಡಿದ 3
ಅಂಬುಜಾಧವ | ಇವರ ತುಂಬಿ ವೈಭವ
ತುಂಬಿ ಸುಜನರ ಕದಂಬ ಸಲಹುವ 4
ಭಾರತೀಪತಿ | ಇವರ ವೀರಸಾರಥಿ
ಸಾರಿ ಭಜಿಪರ ಸಕಲ ಭಾರವಹಿಸುವ 5
ಅಕ್ಷಯಾಫಲ | ಅಪರೋಕ್ಷ ಕೊಡುವನು
ತ್ರಕ್ಷವಲ್ಲಭಾ ಇವರ ದಕ್ಷರೆನಿಸಿಹ 6
ದಾಸರತ್ನನಾ | ದಯವ ಲೇಸು ಪಡೆಯಲು
ಸೂಸಿ ಬರುವನು ಶ್ರೀ ಜಯೇಶವಿಠಲ 7
***