Thursday 5 August 2021

ವಿಜಯದಾಸರ ದಿವ್ಯ ವಿಜಯ ನೆನೆವರ ankita jayesha vittala vijayadasa stutih

 ..

ವಿಜಯದಾಸರ | ದಿವ್ಯ

ವಿಜಯ ನೆನೆವರ ಪ


ವಿಜಯಸಾರಥಿಯ ಮನದಿ

ಭಜಿಪ ಸತ್ವರ ಅ.ಪ.


ಆದಿದೇವನ | ಒಲುಮೆ ಸಾಧಿಸಿದನ

ಯಾದವೇಶನ | ಕಂಡ ಮೋದ ಭರಿತನ 1

ಮನದಿ ಹರಿಯನು | ಸತತ ಕುಣಿಸಿ ನಲಿವನು

ಪ್ರಣಿತ ಪಾಲಯ | ಅಮೃತ ಖಣಿ ವಿಶಿಷ್ಟನು 2


ಭಕ್ತಿಯುಕ್ತಿಯ | ಮಹಾವಿರಕ್ತಿ ಉಕ್ಕುತ

ಭಕ್ತ ಜನರಿಗೆ ಬಿಂಬ ವ್ಯಕ್ತಿ ಮಾಡಿದ 3


ಅಂಬುಜಾಧವ | ಇವರ ತುಂಬಿ ವೈಭವ

ತುಂಬಿ ಸುಜನರ ಕದಂಬ ಸಲಹುವ 4


ಭಾರತೀಪತಿ | ಇವರ ವೀರಸಾರಥಿ

ಸಾರಿ ಭಜಿಪರ ಸಕಲ ಭಾರವಹಿಸುವ 5


ಅಕ್ಷಯಾಫಲ | ಅಪರೋಕ್ಷ ಕೊಡುವನು

ತ್ರಕ್ಷವಲ್ಲಭಾ ಇವರ ದಕ್ಷರೆನಿಸಿಹ 6


ದಾಸರತ್ನನಾ | ದಯವ ಲೇಸು ಪಡೆಯಲು

ಸೂಸಿ ಬರುವನು ಶ್ರೀ ಜಯೇಶವಿಠಲ 7

***


No comments:

Post a Comment