Showing posts with label ಈ ಭಾಗ್ಯ ನೋಡ ಒಯ್ಯಾರಿನಮ್ಮ ಸೌಭಾಗ್ಯ ಶ್ರೀ ಕೃಷ್ಣ ಕೈ ಸೇರಶೌರಿ ramesha. Show all posts
Showing posts with label ಈ ಭಾಗ್ಯ ನೋಡ ಒಯ್ಯಾರಿನಮ್ಮ ಸೌಭಾಗ್ಯ ಶ್ರೀ ಕೃಷ್ಣ ಕೈ ಸೇರಶೌರಿ ramesha. Show all posts

Wednesday, 4 August 2021

ಈ ಭಾಗ್ಯ ನೋಡ ಒಯ್ಯಾರಿನಮ್ಮ ಸೌಭಾಗ್ಯ ಶ್ರೀ ಕೃಷ್ಣ ಕೈ ಸೇರಶೌರಿ ankita ramesha

 ..

ಈ ಭಾಗ್ಯ ನೋಡ ಒಯ್ಯಾರಿನಮ್ಮ ಸೌಭಾಗ್ಯ ಶ್ರೀ ಕೃಷ್ಣ ಕೈ ಸೇರಶೌರಿ ಪ.

ಹತ್ತೆಂಟು ಸಾಲಿನ ಬತ್ತಾಸದಂಗಡಿಭತ್ತದ ಅರಳು ಮೊದಲಾಗಿ ಏ ನಾರಿಭತ್ತದ ಅರಳು ಮೊದಲಾಗಿ ಏ ನಾರಿಸಕ್ಕರೆಯ ತಂದಿಟ್ಟು ಮಾರುವವರು ಕಡೆಯಿಲ್ಲ 1

ಕುಂಕುಮ ಅರಿಷಿಣ ಅಲಂಕಾರ ದ್ರವ್ಯವಅಂಕ ಅಂಕಣಕ ನೆರವ್ಯಾವ ಏನಾರಿ ಅಂಕ ಅಂಕಣಕ ನೆರವ್ಯಾವ ಬೆಲೆ ಮಾಡೊಕಂಕಣದ ಕೈಯ ಕೆಲದೆಯರು ಕಡೆಯಲ್ಲಾ ಏ ನಾರಿ 2

ಬುಕಿಟ್ಟು ಪÀರಿಮಳ ದ್ರವ್ಯ ಪೊಟ್ಟಣ ಕಟ್ಟಿತರಹತರಹ ಏ ನಾರಿಪೊಟ್ಟಣವ ಕಟ್ಟಿ ತರಹತರದ ದ್ರವ್ಯವ ಕೊಟ್ಟು ಕೊಂಬುವರು ಕಡೆಯಿಲ್ಲ ಏ ನಾರಿ3

ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು ಸೂಜಿ ಮಲ್ಲಿಗೆ ಸರಗಳ ರಂಗನ ಪೂಜೆಗೊಯ್ವೊ ಪುರುಷರು ಏ ನಾರಿ4

ನಾಲ್ಕು ದಿಕ್ಕಿಗೆ ದಿವ್ಯ ಆಕಳ ಹಿಂಡುಗಳು ಸಾಕುವ ಎರಳೆ ಎಳಿಗಾವು ಏ ನಾರಿಸಾಕುವ ಎರಳೆ ಎಳಿಗಾವು ಹೂಂಕರಿಸಿ ಬಾಹೋ ಚಲ್ವಿಕೆಯ ಏ ನಾರಿ 5

ಎತ್ತೆತ್ತ ನೋಡಿದರೂ ಮುತ್ತಿನ ಪಲ್ಲಕ್ಕಿಉತ್ತಮ ರಥವ ಹಿಡಿದೇಜಿ ಏ ನಾರಿಉತ್ತಮ ರಥವ ಹಿಡಿದೇಜಿ ಮ್ಯಾಲಿನ್ನು ಹತ್ತಿ ಬಾಹುವರು ಕಡೆಯಿಲ್ಲ ಏ ನಾರಿ6

ಬಾಜಾರದೊಳಗಿನ್ನು ರಾಜಸಿಂಹಾಸನ ರಾಜ ರಾಮೇಶ ಕುಳಿತಲ್ಲಿಯೆ ಏ ನಾರಿ ರಾಜ ರಾಮೇಶ ಕುಳಿತು ಪೂಜೆಗೊಂಬೊಮೂರ್ಜಗವು ಮುದದಿಂದ ಏ ನಾರಿ7

****